ನಾಗರಾಜ ಬಿ.ನಾಯ್ಕ ಅವರ ಕವಿತೆ-ಮನಸಿನ ಕನ್ನಡಿಗೆ

ಮಣ್ಣ ಮಡಿಲಲ್ಲಿ
ಮಲಗಿ ನಿದ್ದಿಸುವ
ಜೀವಕ್ಕೆ
ಬೀಸುವ ಗಾಳಿಯೇ
ಸಾಂತ್ವನದ ಕಿರುನಗೆ
ದುಡಿಮೆಗಂಟಿದ
ಬೆವರಿನ ಹನಿಗೆ
ಮಣ್ಣಲ್ಲಿ ಮುತ್ತಾಗುವ
ಹೊಸತನ
ಅದೆಷ್ಟೋ ದಿನ ಕಾಲ
ಕಳೆದು ಹೋದರೂ
ಮತ್ತೆ ಮತ್ತೆ
ಭರವಸೆಯೇ ಕಥಾವಸ್ತು
ಕಲೆಯ ನೆರಳು
ಬೆಳಕಿನ ಮೂಲ
ಪದಕ್ಕೆ ಹತ್ತಿರವಾದ
ಬದುಕು ಭಾವದ
ಒಲವಿಗೆ ನೆಲೆ ನಿಂತ
ಮಾತು ಮೌನ
ಧ್ಯಾನವಾಗಬೇಕು
ಬದುಕು ಮತ್ತೆ
ಸೋತಾಗಲೆಲ್ಲಾ ನಿದ್ದೆಯಿಂದ
ಎದ್ದಂತೆ ಎದ್ದು
ಒಲವಿನ ಮಾತಾಗಬೇಕು…….


One thought on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಮನಸಿನ ಕನ್ನಡಿಗೆ

Leave a Reply

Back To Top