ಕಾವ್ಯ ಸಂಗಾತಿ
ಶಾಲಿನಿ ರುದ್ರಮುನಿ
ನೀ’ ಪ್ರೀತಿ
ಪ್ರೀತಿ ಹನಿಗಳು ಧಾರೆಯಂತೆ
ಪ್ರತಿ ನೆನಪಿನ ಮಳೆಯಲಿರಲಿ
ಅಧರದ ಅಂಚಿನ ಹಾಸದಲಿ
ಎದೆಯ ನಂಬುಗೆಯಲಿ
ಕ್ಷಣ ಕ್ಷಣವು ಘಟಿಸುತಿರಲಿ|
ಜಾವದ ಹೊನ್ನ ಕಿರಣಗಳು
ಕಣ್ಣೊಳಗೆ ಇಳಿವ ಮುನ್ನ,
ಬೈಗಿನ ಕೆಂಧೂಳಿಯಲಿ
ಕೆಂಗರುವು ಕೆನೆವ ಮುನ್ನ
ಸರಿರಾತ್ರಿಯಲದು ಆತ್ಮದ
ಅನುಸಂಧಾನದಲಿ ಮೈದಡವಲಿ,
ಪ್ರೀತಿ ಹನಿಗಳು ಧಾರೆಯಂತೆ
ಪ್ರತಿ ನೆನಪಿನ ಮಳೆಯಲಿರಲಿ
ಎಲೆಕಾಣದ ಹಣ್ಣುಗಾಣದ
ಶರದೃತುವಿನ ರೆಂಬೆಕೊಂಬೆಗಳು
ಪ್ರೀತಿ ನೆನಪ ಕಣ್ಣ ಹನಿಗೆ
ವಸಂತವಾಗಲಿ ಚಿಗುರೊಡೆಯಲಿ
ಬಾಯಾರಿದ ಬಿಸಿಲ ಬಾನು
ನೆನೆದ ನೆಪಕೆ ಘನಿಕರಿಸಲಿ,
ಪ್ರೀತಿ ಹನಿಗಳು ಧಾರೆಯಂತೆ
ಪ್ರತಿ ನೆನಪಿನ ಮಳೆಯಲಿರಲಿ
ಶಾಲಿನಿ ರುದ್ರಮುನಿ
Super sis