ಭಾರತಿ ರವೀಂದ್ರ ಅವರ ಹಾಯ್ಕುಗಳು

೧)
ನೆನಪುಗಳ
ಮುಸಲ ಧಾರೆ, ಬಾಳು
ನಂದನ ವನ

೨)
ಮೂಡುವ ಸೂರ್ಯ
ಬಾಳಿಗೆ ಭರವಸೆ
ಸದಾ ನೂತನ

೩)
ಅವನ ನಗು
ಅಂಗಳದ ಮಲ್ಲಿಗೆ
ನಾಚಿ ಹೂವಾಯ್ತು

೪)
ಅವಳ ಪ್ರೀತಿ
ಬಾನಿಗೂ ಕೂಡ ಮೋಹ
ಮೋಡ ಕರಗಿ

೫)

ಮಡಿಲ ಕಂದ
ನಕ್ಕರೆ ಮನೆ ತುಂಬ

ಘಂಟೆ ನೀನಾದ

೬)
ಅಮ್ಮ ಎಂದರೆ
ದೇವರಿಗೂ ವಿಸ್ಮಯ
ತಾಳ್ಮೆ ತೂಕದ್ದು

୭)
ಕಾವ್ಯ ಜನ್ಮಕ್ಕೆ
ನಾಂದಿ ಕಣ್ಣ ಭಾಷೆ
ಅರಿತಾಗಲೇ

೮)
ಪ್ರೀತಿ ಪ್ರೇಮಕ್ಕೆ
ಭಾಷೆ ಹಂಗೇಕೆ ಕಣ್ಣು
ಮಾತಾಡಿದಾಗ

೯)
ಅರಿತು ನಡೆ
ಅದುವೇ ಸಾಮರಸ್ಯ
ಬಾಳ ನಡೆಗೆ

೧೦)
ಒಲವೇ ಬಾಳು
ಸುಖದ ಹೊನಲದು
ಅನವರತ

Leave a Reply

Back To Top