ಪ್ರಮೋದ ಜೋಶಿ ಅವರ ಕವಿತೆ ಸಾಹಿತಿ

ನೀ ಸಾಯ್ತಿ
ಸಾಹಿತ್ಯಕ್ಕೆಂದು ಬರೆದು
ತಂದುಕೊಳ್ಳುವಿ ದುಃಸ್ಥಿತಿ

ನೋಡುವವರಿಲ್ಲ ಕೇಳುವವರಿಲ್ಲ
ನಿನ್ನ ಭಾವನೆ ಚಿಲುಮೆಯನು
ಒತ್ತರಿಸಿ ಬಂದ ಭಾವನೆಗಳೂ
ಕಾಗದ ದೊರಕದೆ ಮೌನವಾಗಿದೆ

ತುತ್ತು ಕೂಳು ಸಿಕ್ಕೀತೆ
ಇದರೊಳಗೆ ಒಂದೇ ಇದ್ದರೆ
ಶಾಯಿ ಹಾಳೆ ಹಾಳು ಮಾಡಿ
ಕೆಡಿಸಿಕೊಂಡು ನಿದ್ರೆ

ಯಾರಿಗಾಗಿ ಬರೆಯುತ್ತಿ
ಅಕ್ಷರಗಳ ಬುತ್ತಿ ಬಿಚ್ಚಿ
ತುಂಬಿಕೊಂಡರೂ ಮನದ ಹೊಟ್ಟಿ
ಖಾಲಿಯಲ್ಲಾ ನಿನ್ನ ತಟ್ಟೆ

ಲಾಭದ ಹೆಸರಿನ ಮೋಹದಲಿ
ನಿನ್ನ ಹಿಂದೆ ತಳ್ಳುವರು
ಕಾಗುಣಿತ ಅರಿಯದವರೂ
ಮೇಧಾವಿಗಳಾಗಿ ಮೆರೆವರು

ಹರಕು ಬಟ್ಟೆ ಕಿತ್ತ ಚಪ್ಪಲಿ
ಇದೊಂದೇ ಗತಿ ನಿನಗೆ
ನೀ ಬರೆದ ಹಾಳಿ ನೀಡುವುದು
ಮೌನದಿ ನಿನಗೆ ಚಪ್ಪಾಳೆ

ಇದ್ದಾಗ ನೀ ಕವಿಯಲ್ಲ
ಸತ್ತ ಮೇಲೆ ನೀ ಮೇಧಾವಿ
ನೋಡುವರು ಆಮೇಲೆ ಒಂದೊಂದೆ ಹಾಳಿ
ನಿನ್ನ ಚಿತ್ರಕ್ಕೊಂದು ಮಾಲೆ ಹಾಕಿ


ಪ್ರಮೋದ ಜೋಶಿ

Leave a Reply

Back To Top