ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಹಸಿದವರ ಬಿನ್ನಹ
ಬೇಡವೇ ಬೇಡ ನಮಗೆ
ಹಣವಂತರ ಸಹವಾಸ
ಕಾದು ಕುಳಿತಿದ್ದೇವೆ
ಕೇವಲ ತುತ್ತು ಅನ್ನಕ್ಕಾಗಿ
ನಿನ್ನೆಯಿಂದಲೂ ಉಪವಾಸ
ನಿರ್ಗತಿಕರೆಂಬ
ಕಾರಣಕ್ಕಾಗಿ ದೂರ ತಳ್ಳಿ
ನೀಡದಿರಿ ನಮಗೆ ಶಿಕ್ಷೆ
ತುತ್ತು ಅನ್ನಕ್ಕಾಗಿ
ಮನೆ ಬಾಗಿಲಿಗೆ
ಬಂದಾಗ ಮರೆಯದೆ
ನೀಡಿ ಒಂದು ಹಿಡಿ ಭಿಕ್ಷೆ
ಬದುಕುವುದಿಲ್ಲ
ನಾವೆಂದಿಗೂ
ಹಣ – ಆಸ್ತಿಗಾಗಿ
ಆದರೆ…………
ಬದುಕಲೇಬೇಕಾಗಿದೆ
ಕೇವಲ ಹೊಟ್ಟೆ – ಬಟ್ಟೆಗಾಗಿ
ನಾನು – ನನ್ನದು
ಎಂಬ ಸ್ವಾರ್ಥವ
ಬಿಟ್ಟು ಬಿಡಿ
ಹಸಿದ ಹೊಟ್ಟೆಗೆ
ತಿನ್ನಲು ಸ್ವಲ್ಪ
ಅನ್ನ ಕೊಡಿ
ಬಡವರ ಕಂಡರೆ ಬೇಡ
ಎಂದಿಗೂ ತಾತ್ಸರ
ಹಸಿದ ಹೊಟ್ಟೆಗೆ
ನೀಡದೆ ಆಹಾರ
ಮಾಡದಿರಿ ನಮ್ಮನ್ನು
ಸಂಹಾರ………
ಎಂ. ಬಿ. ಸಂತೋಷ್,