ʼಹುತಾತ್ಮ ಗಾಂಧಿʼಪಿ.ವೆಂಕಟಾಚಲಯ್ಯ ಅವರ ಕವಿತೆ

ಆ ಜನವರಿ ಮುವತ್ತರಲ್ಲೂ
ಸಿಡಿದ ಹಂತಕನ ಗುಂಡಿನೇಟು,
ಎದೆಯ ಸೀಳಿ, ರಕುತವ ಹರಿ ಯಲು,
ಆ ನೋವಿನಲ್ಲೂ, ಆ ಸಾವಿನಲ್ಲೂ,
ಪಠಿಸಿದೆಯಾ ಶಾಂತಿ ಮಂತ್ರ.
ಹೇ ರಾಮ್ ರಾಮ್, ದಿವ್ಯ ಮಂತ್ರ
ಶಾಂತಿದೂತ, ಓ ಮಹಾತ್ಮ,
ನೀನಾದೆ ಎಂದೆಂದಿಗೂ ಹುತಾತ್ಮ.

ಸನಾತನರನುಕರಣೆಯಲ್ಲಿ ,
ಬುದ್ಧ ಕ್ರಿಸ್ತರ ನಡೆನುಡಿಯಲ್ಲಿ,
ಸತ್ಯ ಅಹಿಂಸೆಯ ಹರಿಕಾರ,
ತ್ಯಾಗ ಬಲಿದಾನಗಳ ಸಾಕಾರ ,
ದೇಶಬಾಂಧವರ ದಾಸ್ಯ ಸಂಕೋ ಲೆಯ,
ಬಿಡಿಸಿದ ನೀನ್, ಹಂತಕನಿಗೆ ಬಲಿ ಯಾದೆಯ?
ಶಾಂತಿದೂತ ಓ ಮಹಾತ್ಮ
ನೀನಾದೆ ಎಂದೆಂದಿಗೂ ಹುತಾತ್ಮ.

ಪರಕೀಯರ ದಬ್ಬಾಳಿಕೆಯ ದಿಕ್ಕರಿ ಸಿ,
ಸತ್ಯಾಗ್ರಹಿಗಳನು ಒಗ್ಗೂಡಿಸಿ ಮು ನ್ನಡಿಸಿ,
ಆಳರಸರ ಕ್ರೌರ್ಯ ಹಿಂಸೆಗೆ ಅಳಕ ದೆ,
ಏನೇ ಆದರೂ, ಶತೃವಿನ ಮಿತ್ರತ್ವ ಬಯಸಿ,
ಹೋರಾಡಿದೆ ನೀನು, ದೃಢ ನಿಶ್ಚಯ ದಲಿ,
ಕಚ್ಚಾಡುವ ಹೃದಯಗಳ, ಬೆಸೆಯು ತಲಿ ,
ಶಾಂತಿದೂತ ಓ ಮಹಾತ್ಮ,
ನೀನಾದೆ ಎಂದೆಂದಿಗೂ ಹುತಾತ್ಮ.

ಸರ್ವಧರ್ಮಗಳ ನಂಬಿಕೆಯ ಸಾರ ಒಂದೆ,
ಸರ್ವಧರ್ಮಗಳ ನಡೆಗೆ, ಒಂದೆ ಸತ್ಯ ದಡೆಗೆ,
ಸತ್ಯಶೋಧನೆಯೆ, ನಿತ್ಯ ಜೀವನದ ಗುರಿ,
ಎಂದು ಬಗೆದು ಅದರಂತೆ ನೀ ನಡೆ ದೆ,
ಮಾನವೀಯತೆಯ ಸಾಕಾರ ರೂಪಿ,
ಸರಳ ಜೀವಿ, ಕರುಣಾಮಯಿ,
ಶಾಂತಿದೂತ ಓ ಮಹಾತ್ಮ.
ನೀನಾದೆ ಎಂದೆಂದಿಗೂ ಹುತಾತ್ಮ.


.

Leave a Reply

Back To Top