ʼಉದಕದೊಳಗೆ ಕಿಚ್ಚುʼ ವಚನ ವಿಶ್ಲೇಷಣೆ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಉದಕದೊಳಗೆ  ಕಿಚ್ಚು   ಹುಟ್ಟಿ ಸುಡುತಿರ್ದುದು ಕಂಡೆ
ಗಗನ ಮೇಲೆ ಮಾಮರವ ಕಂಡೆ .
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ ಕಂಡೆ ಗುಹೇಶ್ವರ .(ಸ ವ ಸ೦ -೨೯೨  ಆವೃತ್ತಿ ೨ ಪುಟ ೮೫ .)

ಇದು ಮಹಾಜ್ಞಾನಿ ಅಲ್ಲಮ ಪ್ರಭುಗಳ ವಚನ ,ಬಯಲಿನ ಎಲ್ಲ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಜೀವ ಕಳೆ ಮತ್ತು ಬಾಹ್ಯ ಪ್ರಪಂಚದ ಸಂಬಂಧ ಅವುಗಳ ವಿಕಾಸ ಬೆಳವಣಿಗೆ,ಪ್ರಪಂಚದಲ್ಲಿ ಅಡಗಿರುವ ಅನೇಕ ಸತ್ಯಗಳನ್ನು ಅನಾವರಣ ಮಾಡಿದ್ದಾರೆ ಅಲ್ಲಮರು.

ಪ್ರಸ್ತುತ ವಚನದಲ್ಲಿ ನೀರಿನಲ್ಲಿ ಬೆಂಕಿಯ ಕಿಚ್ಚು ಹುಟ್ಟುತ್ತದೆ ಎಂದು ತಮ್ಮ ಕಾಲಜ್ಞಾನದ ಅನುಭಾವ ಹೇಳಿದರು ,ಕೆಲ ಶತಮಾನದ ನಂತರ ಗೊತ್ತಾಯಿತು ವಿದ್ಯುತ್ ನೀರಿನಿಂದ ಹುಟ್ಟುತದೆ ಎಂದು .ಗಗನ ಜನರಿಗೆ ನಿಲುಕದ ಕಾಯ ಎಂದು ನಂಬಿದ್ದ ಜನರಿಗೆ ,ಇಲ್ಲಿ ಗಗನವು ಬಯಲು ಅಲ್ಲಿಯ  ಅನೇಕ  ಗ್ರಹಗಳ ಮೇಲೆ ಜೈವಿಕ ವಿಕಾಸದ ಸಾಧ್ಯತೆ ಇದೆ.ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯ ಮತ್ತು ಅಭಿಮತಕ್ಕೆ ಬಂದಿದ್ದಾರೆ.ಗಗನದಲ್ಲಿ ಮಾಮರವನ್ನು ನೋಡುವ ಕಾಲ ದೂರ ಉಳಿದಿಲ್ಲ .ಇತ್ತೀಚಿಗೆ ನಾಸಾ ವಿಜ್ಞಾನಿಗಳು ಮಾವಿನ ಮರವನ್ನು ಬೇರೆ ಗ್ರಹದಲ್ಲಿ ನೆಡುವ ಪ್ರಯತ್ನದಲ್ಲಿದ್ದಾರೆ.
ಅದೇ ರೀತಿ ಪಕ್ಕವಿಲ್ಲದ ಹಕ್ಕಿ ,ಅಂದರೆ ಮನುಷ್ಯನ ಆತ್ಮ ,ಆತ್ಮವೆಂಬ ಪಕ್ಷಿಗೆ ರೆಕ್ಕೆಯಿಲ್ಲ ಪಕ್ಕವಿಲ್ಲಾ ,ಆದರೆ ದುರಾತ್ಮನ ವಿಚಾರದಿಂದ  ಅಮೆರಿಕೆಯ  ವಿಶ್ವ ವಾಣಿಜ್ಯ ಕಟ್ಟಡ ಕೆಡುವಬಲ್ಲದು.ಅಣು ವಿಕಿರಣ  ಸಂಶೋದನೆ, ಯುದ್ಧಕಾಂಡ ,ಕ್ಷಿಪಣಿಗಳು ,ಬಾಂಬು ಇಂತಹ ಸ್ಪೋಟದಿಂದ ನಾಗಸಾಕಿ ಮತ್ತು ಹಿರೋಷಿಮಾ ೧೯೪೫ ರಲ್ಲಿ ನಲುಗಿ ಸುಟ್ಟು  ಕರಕಲು ಆದಂತೆ ,ಇಡಿ ಭೂಮಿಯೇ ಸುಟ್ಟು ಹೋಗಬಹುದೆಂಬ ಆತಂಕವನ್ನು ಅಲ್ಲಮರು ವ್ಯಕ್ತ ಪಡಿಸಿದ್ದಾರೆ.ಇಂತಹ ಪ್ರಯತ್ನವನ್ನ ಒಸಾಮ ಬಿನ್ ಲಾಡೆನ್ ,ಹಿಟ್ಲರ್,ಮುಸುಲೋನಿ ,ಮುಂತಾದ ಅಧಿಕಾರಪ್ರಿಯ ರಕ್ತ ಪಿಪಾಸಿಗಳು ಬಯಸುತ್ತಾರೆ.ಇಂದು ಎಲ್ಲಾ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಕ್ಷಿಪಣಿಗಳನ್ನು ತಯಾರಿಸುತ್ತಿವೆ ,ಈ ವಿಜ್ಞಾನಿ ಎಂಬ ಪಕ್ಷಿಗಳು ಒಮ್ಮೆ ಈ ಭೂಮಿಯನ್ನು ನುಂಗಬಹುದು, ಇದಕ್ಕೆ ಬಸವ ಭಕ್ತಾರದ ನಾವು ಕೊನೆ ಹೇಳೋಣ.
ನೀರಿನಲ್ಲಿ ಬೆಂಕಿ ಅನ್ವೇಷಣೆ ಅನಿವಾರ್ಯ ಅಗತ್ಯ. ಗಗನದಲ್ಲಿ ಮಾಮರ ನೆಡುವುದು ಬೆಳವಣಿಗೆ. ಆದರೆ ದುರಾತ್ಮ ಪಕ್ಷಿಯು ಭೂವಿಯ ಬಯಲ ನುಂಗುವುದು ಆತಂಕದ ವಿಷಯ ಇಂತಹ ಕಾಲಜ್ಞಾನವನ್ನು ಶರಣರು ಸೂಚಿಸಿದ್ದಾರೆ.


Leave a Reply

Back To Top