ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ

ಅಲ್ಲಿದೆಯಲ್ಲ
ಅದು ಗಂಡನ ಮನೆ
ಅಲ್ಲಿ ಹೆಣ್ಮನವೊಂದಿದೆ
ಮಿಡಿಯುವುದದರ ಗುಣ

ಅದು ತುಡಿಯುತ್ತೆ
ಸದಾ ತನ್ನೆಡೆಗಿನ  ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ, ಮುಗುಳ್ನಗೆಗಾಗಿ

ಕಿರುಗಣ್ಣ ಬಿರುನೋಟಕ್ಕೆ
ತಳಮಳಿಸಿ ಮನ ಕುಗ್ಗಿ ನಿರೀಕ್ಷೆ ಸಾಯುತ್ತೆ,
ಅದು ಆ ಕ್ಷಣಕ್ಕೆ

ಅಲ್ಲಿಂದ ಕಾಲ್ಕಿತ್ತು
ಮತ್ತೆ ಓಡುತ್ತೆ ಒಡಲ ತುಂಬಿಸಲು
ಅಂಬಲಿಯನೀಯಲು-ಹಂಬಲವಿಲ್ಲದ  ಮನ ಕೂಳು ತಿಂದು ಅವಳಿರುವಿಕೆ ಸತ್ತ ಭಾವದ  ಹುರಿ ತೇಗ ತೇಗಿ ನಿರುಮ್ಮಳವಾಗುವವು

ಅವಳದು ಹೆಣ್ಮನ ಎಂದೆನಷ್ಟೆ
ಮಡಿಲ ಜೋಳಿಗೆ ಹಾಕಿ ಜೋಗುಳಕೆ ಕಾಯುವವಳ ಎದೆಗೊದ್ದಂತೆ ಬಿದ್ದುಕೊಳ್ಳುವ ಹೃದಯಹೀನ ಮನಗಳು

ಆಕೆ ಮಡಿಲ ಸಂತೈಸಿ
ಮಡಿಲೊಳಗೆ ಮುಖವಿರಿಸಿ ಮಗುವಂತೆ ಅತ್ತು ಎಲ್ಲ ಮರೆತು ಮಗುವಾಗುವಳು


One thought on “ಭಾರತಿ ಅಶೋಕ್ ಅವರ ಕವಿತೆ-ʼತನ್ನವರ ಕನವರಿಕೆಯಲಿʼ

Leave a Reply

Back To Top