ಕಾವ್ಯ ಸಂಗಾತಿ
ಗೋವ ತೀರ್ಥಯಾತ್ರೆಯ ಹನಿಗಳು.
ಎ.ಎನ್.ರಮೇಶ್.ಗುಬ್ಬಿ.

- ಗೋವಾ.!
ಪಡ್ಡೆಗಳ ಪಾಲಿನ
ಪರಮ ಪವಿತ್ರ
ತೀರ್ಥ(?) ಯಾತ್ರ.!
- ನೀರಸ.!
ಕಡಲ ಖಾದ್ಯ ಅಭ್ಯಾಸವಿಲ್ಲದವರಿಗೆ
ಗೋವಾ ಯಾತ್ರೆ ಸಪ್ಪೆ.!
ತೀರ್ಥ ಸೇವನೆ ಹವ್ಯಾಸವಿಲ್ಲದವರಿಗೆ
ಸಪ್ಪೆಯೋ ಸಪ್ಪೆ ಸಪ್ಪೆ.!
- ತೀರ್ಥದ ಯಾತ್ರೆ.!
ಅದೇಕೋ ಯಾರೊಬ್ಬರೂ ಮಾಡುವುದಿಲ್ಲ
ಗೋವಾಗೆ ಮಾತ್ರವೆ ಪಾದಯಾತ್ರೆ.!
ಗಾಡಿಯಲ್ಲೆ ಮಾಡುವರು ಗೋವಾಕ್ಷೇತ್ರಕ್ಕೆ
ತೀರ್ಥದೊಂದಿಗೆ ತೀರ್ಥ ಯಾತ್ರೆ.!
- ಗೋವೆಯ ರಂಗು.!
ಕಡಲಲ್ಲಿ ಭೋರ್ಗರೆವ ಬೆರಗು
ದಡದಲ್ಲಿ ಬೆಡಗಿಯರ ಸೊಬಗು
ಕಂಗಳಲ್ಲಿ ಮದಿರೆಯ ಮಿನುಗು.!
ವಿವಿಧ ನಶೆಯ ಗುನುಗು ರಂಗು.!
- ಇಂಧನ ಎಣ್ಣೆ.!
ಕಾರವಾರಕ್ಕಿಂತ ಗೋವಾದಲ್ಲಿ
ಎಣ್ಣೆ ಇಂಧನ ಬಲು ಅಗ್ಗ
ಮಂದಿಗೆ ವಾರಾಂತ್ಯದಿ ಗಾಡಿಗು
ಬಾಡಿಗು ಎಣ್ಣೆ ತುಂಬಿಸುವ ಸಗ್ಗ.!
- ತೀರ್ಥ(?) ಕ್ಷೇತ್ರ.!
ಕಾಶಿ ರಾಮೇಶ್ವರ ಕ್ಷೇತ್ರಗಳಿಂದ
ಪ್ರಸಾದ ತರುವ ಸಂಪ್ರತಿ
ಗೋವಾ ಯಾತ್ರೆಯಿಂದ ಮಾತ್ರ
ತೀರ್ಥ ತರುವ ಪದ್ಧತಿ.!
- ತೀರ್ಥದ ಕ್ಷೇತ್ರ.!
ಕಿನಾರೆದರ್ಶನ ಮಾಡಿ ವಾಸ್ತವ್ಯ ಹೂಡಿ
ತೀರ್ಥಕ್ಕಾಗಿ ತೀರ್ಥಯಾತ್ರೆಗೆ ಹೋಗುವ
ಏಕೈಕ ತೀರ್ಥ-ಕ್ಷೇತ್ರವೇ ಗೋವಾ.!
ಎ.ಎನ್.ರಮೇಶ್.ಗುಬ್ಬಿ.
- ಕ್ಷೇತ್ರ ಮಹಿಮೆ.!
ಬಂಧುಗಳೊಂದಿಗೆ ಪಿಂಡ ಪ್ರದಾನ
ಮಾಡಲು ಹೋಗುವ ಕ್ಷೇತ್ರ ಗಯಾ.!
ಗೆಳೆಯರೊಂದಿಗೆ ತೀರ್ಥ ಸೇವನೆ
ಮಾಡಲು ಹೋಗುವ ಕ್ಷೇತ್ರ ಗೋವ.!
- ಗೋವಾ ಯಾತ್ರೆ.!
ಮುದವಿಡುವ ಬೀಚು ಸ್ನಾನ
ಮತ್ತೇರಿಸುವ ಬೀರು ಪಾನ
ಕಣ್ಕುಕ್ಕುವ ವಿದೇಶಿ ದರ್ಶನ
ಪುಳಕಿಸುವ ಕಡಲ ಯಾನ
ಕಿಕ್ಕೇರಿಸುವ ಪಾಶ್ಚಾತ್ಯ ಗಾನ
ಮೋಜು ಮಸ್ತಿಯ ರಸತಾನ.
ಎ.ಎನ್.ರಮೇಶ್.ಗುಬ್ಬಿ.
