ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಅವರ ಕವಿತೆ-
ಒಲವೇ
ಕಟ್ಟಿಟ್ಟ ಕನಸುಗಳ
ಬಚ್ಚಿಟ್ಟ ಮಾತುಗಳ
ಈ ವರುಷ ನಿನಗೆ
ಹೇಳಲಾಗಲಿಲ್ಲ
ಕ್ಷಮಿಸಿಬಿಡು !
ನನ್ನಕಣ್ಣ ಕ್ಯಾಮೆರಾದ ತುಂಬಾ
ತುಂಬಿತಂದ ನಿನ್ನಬಿಂಬವನು
ನನ್ನೆದೆಯ ತಿಜೋರಿ ಯೊಳಗೆ ಮುಚ್ಚಿಟ್ಟಿದ್ದೆ ಯಾರಕಣ್ಣೂ
ತಾಕಬಾರದೇಂದು ಈ
ವರುಷ ತೆರೆಯಲಾಗಲಿಲ್ಲ
ಕ್ಷಮಿಸಿಬಿಡು !
ನನಸಾಗದ ಕನಸುಗಳು
ನುಡಿಯದೇ ಉಳಿದ
ಪದಗಳು ಕಾಲನಿಗಿಂತ
ದೊಡ್ಡವೇನಲ್ಲ !
ನನ್ನ ಮಾತಿಗೆ ಕಿವಿಯಾಗು ಸಾಕು
ನಿನುಸುರುವ ಪಿಸುಮಾತಿಗೆ ನಿನ್ನ ಹೆಜ್ಜೆಯ ಗೆಜ್ಜೆ ಸದ್ದಿಗೆ
ನನ್ನೆದೆಯ ಮಿಡಿತವೇ ನಾದ
ದಯಮಾಡಿ ಗೆಜ್ಜೆ ತೆಗೆಯಬೇಡ
ನಿನ್ನ ಕಣ್ಣ ಕಂದೀಲಿನ ಬಿಸಿಯೇ ಸಾಕೆನಗೆ ಮುಂಗಾರು ಕಂಡು ಕುಣಿಯುವ ಮನದ ನವಿಲು ಬರುವ ಬಿರು ಬಿಸಿಲಿನ್ನೇ
ಮರೆತರೇ ಹೇಗೆ
ಬೆಂದ ಬದುಕು ಅರಳಲಿ
ನೊಂದ ಹೃದಯ ನಲಿಯಲಿ
ಕಂದದೇ ಉಳಿದ ನೆನಪು ಕಟ್ಟಿ ಕಾಡದಿರಲಿ ದುಂಡು ಮಲ್ಲಿಗೆ ಘಮ ಘಮಘಮಿಸುತಿರಲಿ
ಹೊಸವರುಷದ ಹೊಸ
ಹರುಷದಲಿ ಒಲವು ಚಿಗುರತಲಿರಲಿ
ನಿನ್ನ ನೋವೆಲ್ಲಾಕೊನೆಯಾಗಿ ಬಿಡಲಿ
ಹೊಸವರುಷದಲಿ ಬೆಸೆದ
ಬೆಸುಗೆ ಶತಕಗಳ ಕಾಲವಿರಲಿ
ಇಮಾಮ್ ಮದ್ಗಾರ
Nice