ಕಾವ್ಯ ಸಂಗಾತಿ
ಹೆಚ್.ಎಸ್.ಪ್ರತಿಮಾ ಹಾಸನ್
ಕ್ಯಾಲೆಂಡರ್ ಬದಲಾವಣೆಯಷ್ಟೇ 2025
ಬಂದಿತು ಬಂದಿತು ಹೊಸ ವರ್ಷ
ಎನ್ನದಿರಿ ಅದು ನಮ್ಮಗಲ್ಲ
ಕ್ಯಾಲೆಂಡರ್ ಬದಲಾವಣೆಯಷ್ಟೇ
ನಮಗಿಹುದು ಯುಗಾದಿ ಹಬ್ಬವು….
ಸಂವತ್ಸರದ ಸಂಭ್ರಮದಿ ಆಚರಿಸೋಣ
ಹಬ್ಬದ ಸಡಗರ ಹೊಸತನದಿ ಕಾಣೋಣ
ಹಿಂದೂಗಳ ಸಡಗರ ಹಬ್ಬವದು
ಬಂದಿಹುದು ಹೊಸ ವರ್ಷವಿದು…..
ಕ್ಯಾಲೆಂಡರ್ ಬದಲಾಮಣಿಯಷ್ಟೇ
ನಮ್ಮತನವನ್ನು ನಾವು ಕಾಣೋಣ
ಬಾಕಿ ಇರುವ ಕಾರ್ಯಗಳ ಸ್ಮರಿಸೋಣ
ಕೆಟ್ಟ ಆಲೋಚನೆಗಳ ಇಲ್ಲಿಗೆ ಮುಗಿಸೋಣ….
ನಮ್ಮ ಸಂಸ್ಕೃತಿಯ ಅರಿಯುತನಡೆಯೋಣ
ಹಿಂದೂ ಧರ್ಮದ ಎತ್ತಿ ಹಿಡಿಯೋಣ
ಪೂರ್ವಿಕರ ಆಚರಣೆಯ ನಾವು ಅನುಸರಿಸೋಣ
ಮುಂದಿನ ಪೀಳಿಗೆಗೆ ಮಾರ್ಗದರ್ಶನ ವಾಗೋಣ…..
ಈಗ ಕ್ಯಾಲೆಂಡರ್ ಬದಲಿಸುತ ನಾವೆಲ್ಲ
ಯುಗಾದಿ ಹಬ್ಬಕ್ಕೆ ಕಾಯೋಣ
ಸಡಗರದಲಿ ಹೊಸತನವ ಕಾಣೋಣ
ಕ್ಯಾಲೆಂಡರ್ ಅನ್ನು ಬದಲಾವಣೆ ಮಾಡೋಣ……
ಹೆಚ್.ಎಸ್.ಪ್ರತಿಮಾ ಹಾಸನ್.
Very true mam
Savita Deshmukh