ಡಾ ಸಾವಿತ್ರಿ ಕಮಲಾಪೂರ ಕವಿತೆ-ಮೂಡಿ ಬರಲಿ ಹೊಸ ವರುಷಕೆ ಸಂತಸ

ಡಾ ಸಾವಿತ್ರಿ ಕಮಲಾಪೂರ

ಮೂಡಿ ಬರಲಿ ಹೊಸ ವರುಷಕೆ ಸಂತಸ

ನಗು ಒಮ್ಮೆ ಅಳುವ ಮರೆತು
ನಿತ್ಯ ಸಂತಸದ ನಗೆ ಹೊತ್ತು
ಮೂಡಿ ಬರಲಿ
ಹೊಸ ಗಳಿಗೆ ಹೊಸ ವರುಷ
ತರಲಿ ನೂರು ಹರುಷ

ಬರೆದ ಭಾವ ಪುಟದ ಅಕ್ಷರಗಳು ಅ
ಮುತ್ತಾಗಿ ಪೋಣಿಸಲಿ
ಬದುಕಿನಾಗಸದ ನಿತ್ಯ ನೂತನಕೆ
ಹೊಸ ಕನಸಿಗೆ ಹಳೆಯ ತೆರೆಯನು
ಸರಸಿ ನಡೆಯಲಿ

ಅನುಮಾನದ ಕಸ ಕಡ್ಡಿ
ಕೊರೆಯುವ ಚಳಿಯ ನಡುವಲಿ
ಕೊಚ್ಚಿ ಹೋಗಲಿ
ಹರಿ ಬಿಟ್ಟ ಒಡಕು ಮಾತುಗಳು
ಮುಚ್ಚಿ ನಗಲಿ

ಹೊಸ ಕಾಲ ಹೊಸ ದಿಗಂತ
ಕಾಲ ಕರೆಯುವ ಸಂತಸ
ಹರುಷ ನಗೆಗೆ
ಕರ್ಣ ಇಂಪನದ ನಗೆ
ಹೊರ ಸೂಸಿ ಬರಲಿ

ಹಳೆಯ ದಿನಗಳು ಹಳಚಿ ಹೋದವು
ಹೊಸ ಕಾಲ ಮೃಷ್ಟಾನ್ನ ಹೊನ್ನು ಮನೆಯ ತುಂಬ ತುಂಬಿ ತುಳಕಲಿ
ಹಬ್ಬಿರುವ ತಾಯಿ ಬೇರು
ಹಬ್ಬಾಗಿ ಆಚರಿಸಲಿ

ನೋವಾದರೇನು ? ಕಳೆದ ದಿನ
ಮತ್ತೆ ಮೂಡಿ ಬಂದಿದೆ
ಹೊಸ ಕಾಲ ಅರುಣೋದಯ
ಚೈತ್ರ ಮಾಸದ ಮರಿ ಕೋಗಿಲೆ
ಮತ್ತೆ ಹಾಡಲಿ


ಡಾ ಸಾವಿತ್ರಿ ಕಮಲಾಪೂರ

Leave a Reply

Back To Top