ಭವ್ಯ ಸುಧಾಕರ ಜಗಮನೆ
ಹಾಸ್ಯ ಚು(ಕು)ಟುಕುಗಳು
ಹಾಗೆ ಸುಮ್ಮನೆ *
೧) ಮಗ ಈಗ ನೀನು ಹಿಡಿಯದಿದ್ದರೆ ಪೆನ್ನು
…
ಮುಂದೆ ಹಿಡಿಯಬೇಕಾಗುತ್ತೆ ಗನ್ನು (ಅಮ್ಮನಿಗೆ ರೌಡಿ ಆಗುವನೆಂಬ ಆತಂಕ )
ನಾ ಹಿಡಿದರೆ ಗನ್ನು ನಾವು ಮಾತ್ರ ಅಲ್ಲ ದೇಶವೆ ನೆಮ್ಮದಿಯಾಗಿ ಇರುತ್ತೆ ಅಮ್ಮ (ಮಗ ಸೈನಿಕನಾಗುವ ಕನಸು )
೨) ಮಗ ಹೊಸ ವರ್ಷದಲ್ಲಿ ಏನು ಬದಲಾವಣೆ ಮಾಡ್ಕೋತಿಯ..?..
*ಅಮ್ಮ ನಾನು ಹೆಚ್ಚು ಧ್ಯಾನ ಮಾಡ್ಬೇಕು ಅಂದ್ಕೊಡಿದಿನಿ,..!…ಏಕೆಂದ್ರೆ ಆಗ ನಿಂಗೆ ನಾ ನಿದ್ದೆ ಮಾಡ್ತಾ ಇದೀನಾ ಅಥವಾ ಧ್ಯಾನ ಮಾಡ್ತಾ ಇದೀನಾ ಅಂತಾ ಗೊತ್ತಾಗಲ್ಲ..
೩). ಏನೋ..,.. ಮಗನೇ ..ರೂಮಲ್ಲಿ ಒಬ್ಬನೇ ಬಾಗಿಲು ಹಾಕಿಕೊಂಡು ಬುಕ್ಕಲ್ಲಿ ಮುಳುಗಿರುತ್ತೀಯ , ಸಾಹಿತಿ ಮಗ ಅಲ್ವಾ ಎಲ್ಲ ನನ್ನ ಪ್ರಭಾವ,… ಹಾಗೇನಿಲ್ಲಮ್ಮ ಎಲ್ಲ ಅಪ್ಪನ ಪ್ರಭಾವ..!!!… ನಾ.. ಮುಳುಗಿರುವುದು.. ಫೇಸಬುಕ್…..
೩).
ಅಮ್ಮ ನನ್ನ ಮಾರ್ಕ್ಸ್ ಕಾರ್ಡ್ ಗೆ ಸಹಿ ಮಾಡು,
ಸರಿ ಸಹಿ ಮಾಡ್ತೀನಿ ಬೇಗ ನನ್ನ ಕನ್ನಡಕ ತಗೋಬಾ, ಅಮ್ಮ..ಅದು..ನಾನು ಮಿಸ್ಸಾಗಿ ನಿನ್ನ ಬ್ಯಾಗ್ ಅಂತ ಅಪ್ಪನ ಬ್ಯಾಗಲ್ಲಿ ಇಟ್ಟಿದ್ದೆ ಅಪ್ಪ ಆಫೀಸ್ಗೆ ಹೋಗಿದ್ದಾರೆ.
ಓ ಇರ್ಲಿ ಬಿಡು ನಾ ಆಫರ್ ಅಂತಾ ಎರಡು ಕನ್ನಡಕ ತಂದಿದ್ದೆ ಅದು ಬೀರಲ್ಲಿದೆ,
ಭವ್ಯ ಸುಧಾಕರ ಜಗಮನೆ
Superb