ಕಾವ್ಯ ಸಂಗಾತಿ
ಗಾಲಿಬ್ ನೆನಪಿಗೊಂದು ಗಜಲ್-
ಹಮೀದಾ ಬೇಗಂ ದೇಸಾಯಿ

ನಿನ್ನಂಗಳದ ಗುಲಾಬಿಗಳನೆಲ್ಲ ನಮಗೇ ನೀಡಿದೆ ಗಾಲಿಬ್
ನಿನ್ನೆದೆಯ ಜೇನುಪದಗಳ ಮೊಗೆದು ಸುರಿದೆ ಗಾಲಿಬ್
ಕೆಂಡದ ಜಿಂದಗಿ ಬೇಯಿಸಿತು ಸಣ್ಣಗೆ ಅಲ್ಲವೇ
ತಂಪು ಶಾಯಿಯಲದ್ದಿ ಮುಹಬ್ಬತ್ ನ ಪಕಳೆಗಳ ಬಿಡಿಸಿದೆ ಗಾಲಿಬ್
ವ್ಯಥೆಯ ಕಥೆಗೆ ಲೇಪಿಸಿದೆ ಪ್ರೇಮದ ಕವಚವನು
ಕಂಬನಿಗೂ ಅಳುತ ನಗಲು ಕಲಿಸಿದೆ ಗಾಲಿಬ್
ಮರೆ ಮಾಡಿದೆ ಮನದಳಲು ಲೋಕದ ನಜರ್ ನಿಂದ
ಖುಷಿಯ ಸಿಂಚನವ ಸಿಂಪಡಿಸಿ ತಣಿಸಿದೆ ಗಾಲಿಬ್
ಶಾಯರ್ ಗಳ ಹೃದಯದರಸ ಕವಿರಾಜ ನೀನಾದೆ ಜನಾಬ್
ಬೇಗಂಳ ಸಲಾಮ್ ಶಿರಬಾಗಿ ಮಣಿದಿದೆ ಗಾಲಿಬ್.
ಹಮೀದಾ ಬೇಗಂ ದೇಸಾಯಿ

ಸೋದರಿ ಹಮೀದಾ ಮಸ್ತ ಮಸ್ತ