ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಮಗಳು
ಅವು ಪುಸ್ತಕವೋ ಕನಸೋ ಸಡಗರವೋ ಉಲ್ಲಾಸವೋ… ತುಂಬೇ ತುಂಬುತ್ತಾಳೆ ಬಟ್ಟೆಯ ತೀಜೋರಿಯ ತುಂಬಾ ಹೊರಲಾರದಂತೆ
ಮೊಲಹಾರುವದು ತಡವಾಗಬಹುದು
ಜಿಂಕೆಯೋಟವೂ ನಿಧಾನವಾಗಬಹುದು
ಕಣ್ರೆಪ್ಪೆಬಡಿಯುವದರೊಳಗೆ ಶಾಲೆಯಂಗಳದಲ್ಲಿ !
ಬಿಡೆರಡುದಿನ ಶಾಲೆಯೆಂದರೆ ಸಾಕು !
ಅಕ್ಕಪಕ್ಕದ ಸಾಮಾನಿಗೆ ಹುೃದಾಯಾಘಾತ .
ಆ ಪುಟ್ಟಹುೃದಯ ದೊಳಗೆಷ್ಟು ಕನಸಿವಿಯೋ ?
ಅವಳ ಕನಸನ್ನೊಮ್ಮೆ
ಕೆಣಕಿ ಕೆದಕ ಬೇಕೇಂದುಕೊಂಡೆ
ಗದರಿಬಿಟ್ಟಾಳೆಂಬ ಭಯದಲ್ಲಿ ಸೈಲೆಂಟಾಗಿಬಿಟ್ಟೆ
ಬೆಳೆಸಬಹುದೇ ಭವಿತವ್ಯ ?
ನನ್ನ ಮಗಳ ಕನಸುಗಳ !
ಎಂಬಾತಂಕ ಎಡೆಬಿಡದೇ ಕಾಡುತಿದೆನ್ನ
ಎಕೆಂದರೇ ಅವಳೆಣ್ಣು ತಾನೇ ?
ರಾಣಿಚನ್ನಮ್ಮ.ಝಾನ್ಸಿಲಕ್ಷ್ಮಿ. ಪ್ರಧಾನಿ ಇಂದಿರಾ.ತಾಯಿ ತೆರೇಸಾ.ಲತೆಯೂ ಬಳುಕುವಂತೆ ಹಾಡಿದ ಲತಾ. ಇವರೆಲ್ಲರೂ ತಾರೆಯೂರಿಗೆ ಡಾಂಬಾರು ಹಾಕಿದ್ದು ಹೆಣ್ಣಾಗಿಯೇ ಎಂಬ ಹೆಮ್ಮೆ
ಅವಳ ಕನಸು ಕನಲದಂತೆ ಕಾಪಾಡುವ ನನ್ನ ಕನವರಿಕೆಗೆ
ಒಂದೀಷ್ಟು ಕಸುವುಕೊಡು ದೇವರೇ…
ನನ್ನುಸುರಿನಲಿ ಅವಳ ಸಾಧನೆಯ ಹೆಸರಿರುವಂತೆ
ಇಮಾಮ್ ಮದ್ಗಾರ
One thought on “ಇಮಾಮ್ ಮದ್ಗಾರ ಅವರ ಕವಿತೆ ಮಗಳು”