ಗಾಲಿಬ್‌ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್

ಮದಿರೆಯ ಮಜ್ಜನದಲ್ಲಿ ಜೀವ ಸುಖ ಕಂಡು ಹಾಡಿದವನು ಗಾಲಿಬ್
ಮಹಲಿನ ಮೊಹಬ್ಬತ್ ನು ಬೀದಿಗೆ ತಂದು ನಲಿದವನು ಗಾಲಿಬ್

ಆತ್ಮ ಗೌರವ ಹಠಮಾರಿತನ ಮೈಗೂಡಿಸಿಕೊಂಡ ಶರಾಬಿನ ಸಂತ
ಅಬ್ದುಸ್ ಸಮದ್ ನ ಪ್ರಿಯ ಷಾಗಿರ್ದ್ ಆಗಿ ಬೆಳದವನು ಗಾಲಿಬ್

ಉರ್ದು ಸಾಹಿತ್ಯ ಲೋಕದ ಬೆಳಕಿನ ಕಿರಣವಾಗಿ ಹೊಂಬೆಳಕು ಮೂಡಿಸಿದ
ಇಪ್ಪತ್ತೈದರ ಹರಯಕ್ಕೆ ಗೆಜ್ಜೆಯೊಂದರ ನಾದಕ್ಕೆ ತಾಳವಾದವನು ಗಾಲಿಬ್

ಅವಳನ್ನು ನೋಡಿದ ಮರುಕ್ಷಣ ನನ್ನ ಕಣ್ಣು ಮಿಂಚಂತೆ ಮಿನುಗುತ್ತದೆ
ಪ್ರೀತಿ ಖಾಯಿಲೆ ಎನ್ನುವುದು ಸಾದಾ ಸೀದಾ ಸುಳ್ಳು ಎಂದವನು ಗಾಲಿಬ್

ಜೀವಮಾನದ ನೋವು ಹತಾಶೆ ಸಂಕಟಗಳನ್ನು ಕಾವ್ಯದಲ್ಲಿ ಸಾರಿದ
ಮೃದು ಮಧುರ ಶೈಲಿಯಲಿ ಪ್ರೇಮದ ತೀವ್ರತೆ ತುಂಬಿದವನು ಗಾಲಿಬ್

ಮುಸ್ಲಿಂ ಸಂವೇದನೆಯಾಚೆಗೂ ವೇದಾಂತಿಯ ಚಿಂತಕನಾದವನು
ಸಮ ಸಮಾಜ ಸುಧಾರಣೆಗೆ ಕ್ರಾಂತಿಯ ಕಿಡಿ ಹಚ್ಚಿದವನು ಗಾಲಿಬ್

ಬದುಕು ಬೆತ್ತಲು ಗೊಳಿಸಿ ಬಯಲಲ್ಲಿ ಬಯಲಾಗಿ ನಿಂತ ಫಕೀರ ಇವ
ಅಬಾಟೀಯ ವಿಚಾರಧಾರೆ ತತ್ವದರ್ಶಗಳನ್ನು ಹಂಚಿಕೊಂಡವನು ಗಾಲಿಬ್


Leave a Reply

Back To Top