ಕಾವ್ಯ ಸಂಗಾತಿ
ಬಾಗೇಪಲ್ಲಿ ಕೃಷ್ಣಮೂರ್ತಿ
ಗಜಲ್
ಈಗ ಇಲ್ಲೇ ಎಲ್ಲೋ ಇದ್ದೆಯಂತೆ ಎತ್ತಹೋದೆ
ಕಂಡು ಕಾಣಿಸದೆ ಮೋಡಿಯಂತೆ ಮಾಯವಾದೆ
ಆಗಲೂ ಇದ್ದೆ ಈಗ ಇರುವೆ ಮುಂದಿಗೂ ಇರುವೆ
ನಿನಗಿಷ್ಟ ಬಂದ ಜೀವಿಯ ಕಾಯದಿ ನಿವಸಿಸಿದೆ
ಮಾನವ ದೇಹದ ಮೇಲೇಕೊ ನಿನಗೆ ಅತಿ ಪ್ರೀತಿ
“ನಾನು” ಎಂಬ ಬಿರುದು ಇಲ್ಲಿ ಮಾತ್ರ ಲಭ್ಯವಿದೆ
ಏಷ್ಟೇ ಮೈ ಕೊಡವಿದರೂ ನೀ ನಮ್ಮ ಬಿಟ್ಟು ಹೋಗೆ
ಕೋಶ ಕೋಶದ ಮೇಲೆ ನಿನ್ನ ಅಧಿಕಾರವ ಸ್ಥಾಪಿಸಿದೆ
ಶಸ್ತ್ರಕೆ ಸಿಗೆ ಅಗ್ನಿ ಸುಡದೆ ನೀರಲೂ ಸಹ ಇದ್ದುಬಿಡುವೆ
ಕೃಷ್ಣಾ! ಭಗವದ್ಗೀತೆಯಲೂ ಸು ಸ್ಥಾನವ ಗಿಟ್ಟಿಸಿದೆ
ಬಾಗೇಪಲ್ಲಿ ಕೃಷ್ಣಮೂರ್ತಿ