ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಒಳ್ಳೆತನದಲ್ಲಿ ಮದ್ಯಪಾನ ಜೊತೆಯಾಯಿತು ಸಾಕಿ
ನಶೆ ಅಮಲಿನಲಿ ನೋವು ದ್ವಿಗುಣವಾಯಿತು ಸಾಕಿ
ಭಾವ ತೊರೆಯುದಾದರೆ ತೊರೆದು ಬಿಡು ಹಾಯಾಗಿ
ಮೋಜು ಮಧುಪಾನ ಮರಣ ಹಾಡಾಯಿತು ಸಾಕಿ
ಕೆಲಸದ ಹುಡುಕಾಟದಲ್ಲಿ ಸರಪಳಿ ಇಲ್ಲದ ಖೈದಿ
ಹೊತ್ತ ಬಾಳಿನ ಜವಾಬ್ದಾರಿ ಹೊರೆಯಾಯಿತು ಸಾಕಿ
ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವಂತೆ
ಬೆನ್ನಟ್ಟಿ ಕಟ್ಟಿದ ನಂಟಿನ ಬುತ್ತಿ ಕಹಿಯಾಯಿತು ಸಾಕಿ
ಜೊತೆಯಾಗದೆ ಮುನಿಸಿ ಹೋದರೇನು ಮುಗಿಯಿತೆ
ಮಾಜಾ ಋಣಭಾರ ಕರಗದೆ ಗಟ್ಟಿಯಾಯಿತು ಸಾಕಿ
ಮಾಜಾನ್ ಮಸ್ಕಿ