ಶಾರದಜೈರಾಂ.ಬಿ ಅವರ ಕವಿತೆ – ಅಂಬೇಡ್ಕರ್

ಅಂಬೇಡ್ಕರ್ ಎಂಬ ದಿವ್ಯಪ್ರಭೆ
ಆಗಸಕ್ಕೆ ಆ ಭಾಸ್ಕರ
ಜಗದ ಕತ್ತಲೆ ಕಳೆದ
ಅವನಿ ಗೆ ಈ ಅಂಬೇಡ್ಕರ್
ಜನರ ಬಾಳ ಬೆಳಗಿದ
ಹಸಿವ ಭರಿಸಬಲ್ಲೆ
ಅವಮಾನವ ಭರಿಸಲಾರೆ
ಎಂದು ಸಾಧಿಸಿ ತೋರಿಸಿದ ಧೀರ
ಪುಸ್ತಕಗಳೇ ನಿವ್ವಳ
ಜ್ಞಾನವೇ ಜೀವಾಳ
ಅಸ್ಪೃಶ್ಯತೆ ಅಳಿವಿಗೆ
ಕಂಕಣಕಟ್ಟಿದ ಜನನಾಯಕ
ಹಗಲಿರುಳು ಸಮಾಜದ ಹಿತವ
ಬಯಸಿದ ಭೀಮರಾವ್
ಇವರ ಪದವಿಗಳೇ ದಾಖಲೆ
ಕೊರಳ ತುಂಬಿದ ಸರಮಾಲೆ
ನೊಂದವರ ನೋವಿಗೆ ನಲಿವಾದ
ದಮನಿತರ ದಲಿತರ ಧ್ವನಿಯಾದ
ಮಹಿಳೆಗೆ ಮಾನ್ಯತೆ ನೀಡಿದ ಮಮತಾಮಯಿ
ಸಕಲರಿಗೂ ಕರುಣಿಸಿದ ಕರುಣಾಮಯಿ
ಮನೆಮನೆಗಳಲ್ಲಿ ಮಾತಾದ
ಮನ ಮನಗಳಲ್ಲಿ ಮನೆ ಮಾಡಿದ
ಚಿಂತಕ ದಾರ್ಶನಿಕ
ಬುದ್ದನ ಅನುಸರಿಸಿ ಬುದ್ಧನಾದ
ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ
ಸಾರಲು ಸಿದ್ದನಾದ
ಸಮಾಜಕಾರ್ಯಗಳಿಗೆ ಬದ್ದನಾದ
ತಥಾಗತನಂತೆ ಧ್ಯಾನಿಸಿ ಮೌನಿಯಾದ
ಮಾನವತಾವಾದಿ ವಿಚಾರವಾದಿ
ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ರು.
————————————————————————————–

2 thoughts on “ಶಾರದಜೈರಾಂ.ಬಿ ಅವರ ಕವಿತೆ – ಅಂಬೇಡ್ಕರ್

  1. ಕಕವಿತೆ ಸರಳವಾಗಿದೆ. ಸರಳವಾಗಿರುವುದು ಸಹಜ ಮತ್ತು ರಮ್ಯವಾಗಿರುತ್ತದೆ

Leave a Reply

Back To Top