ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮತ್ತೆ ಚಿಗುರುತು ಕನಸು
ಅಂದು ಸರಿ ಇರುಳಿನಲ್ಲಿ
ನಕ್ಷತ್ರದ ಬೆಳಕಿನಲ್ಲಿ
ಮಿಂಚಿತೊಂದು ಬೆಳಕು
ಚಂದಿರನ ನಸು ನಗುವಿನಲಿ…..
ಬಂತೊಂದು ಮಿಂಚಿನ
ಹುಳವೊಂದು ತಿರು-ತಿರಗಿ
ಸುತ್ತುತ್ತಾ ಗುಯಿಗುಟ್ಟುತ
ಹೇಳಿತೊಂದು ಗುಟ್ಟನು…..
ಮನದಶಾಂತಿಯ ಹುಡಕುತ
ಅತ್ತ ಇತ್ತ ಅಲಿಯದೆ ಒಂದೋಮ್ಮೆ
ಮನದ ಆಳಕ್ಕೆ ಇಳಿದು ನೋಡು
ಸೌಜನ್ಯದ ಅನುನಯನದಲಿ…..
ನಿನ್ನ ನೀನು ಅರಿಡೋಡೆ
ಎಲ್ಲೆಲ್ಲೂ ಸುಖ ಶಾಂತಿ ನೆಮ್ಮದಿ
ಆಗರವು., ಹೊಗಳಿಕೆ ತೆಗಳಿಕೆಗಳ
ಕೂಪಕ್ಕೆ ಇಳಿಯದೆ ……..
ನಿನ್ನಲಿ ನೀನಿರೆ ನೀತಿಯೋಳು-
ನಿನ್ನ ನಾಮ ರೀತಿಯೋಳು
ಅವರಿವರು ಎಸೆದು ಕಲ್ಲುಗಳು
ರಾಡಿಗೋಳ್ಳದಿರಲಿ ಮನವು…..
ಏಳು ಎದ್ದೇಳು ನಿನ್ನ ಪಯಣಕ್ಕೆ
ನೂಕದಿರು ದುಃಖ ಆಗಕ್ಕೆ
ಹರಿಯುತ್ತಿರುವ ಕಂಬನಿಯ
ಒರಿಸಿ ನಿಲ್ಲು ಬಾನು ಎತ್ತರಕ್ಕೆ…..
ನಿರ್ಮಲವಾದ -ಶಾಂತ ಹೊಂಡವು
ವಿಚಲಿತ ಗೊಂಡಿದ್ದು, ಒಳಿತಿಗೆಂದು
ಅರಿತು ಅಂತರಂಗದ ತಂತ್ರವ
ಮುನ್ನುಡೆ ಸಾಧನೆಯ ಪಥದಲ್ಲಿ…..
ಬೆಂದ ಮನಗಳಿಗೆ ತಂಪಾಗು
ಕಷ್ಟದಲಿ-ನೀನಾಗು ತಣ್ಣೆಳಲು
ಅರಿತು ಸತ್ಯ ಧರ್ಮದ ಸೂತ್ರವ
ನಿನ್ನ ಆತ್ಮ ಸಾಕ್ಷಿಯಾಗು……..
ಕೇಳುತ್ತಿರೆ ಈ ಅಮೃತ ಮಾತುಗಳ
ಮತ್ತೆ ಚಿಗುರಿತು ಕನಸುಗಳು
ಗೇರೆಕೆದರಿ ಬೆಳೆದು ಎತ್ತರಕ್ಕೆ ಏಣಿ
ಮುಟ್ಟಲು ಗುರಿಯ ತುದಿಯ ತಾಣ …..
ಸಂತಸ ಎಸಗಿ ಉದಯ ಹಾಸದಲಿ……
ಸವಿತಾ ದೇಶಮುಖ
Super