ನಾಗರತ್ನ .ಎಚ್ ಗಂಗಾವತಿ ಅವರ ‘ದೇವನ ಒಲುಮೆ’ ಮಕ್ಕಳ ಕಥೆ

ತಿಮ್ಮಾಪುರ ಎಂಬ ಊರಿನಲ್ಲಿ ಒಂದು ಸುಂದರವಾದ ಕುಟುಂಬವಿತ್ತು. ಆ ಕುಟುಂಬದಲ್ಲಿ ತಂದೆ ತಾಯಿ ಇಬ್ಬರೂ ಮಕ್ಕಳು ವಾಸವಾಗಿದ್ದರು . ಒಂದು ದಿವಸ ರಾಮಣ್ಣನಿಗೆ ಅನಾರೋಗ್ಯ ಉಂಟಾಗಿ ಆತ ಮೃತಪಟ್ಟನು. ಆಗ ಹೆಂಡತಿಯು ತನ್ನ ಮಕ್ಕಳೊಂದಿಗೆ ಜೀವನ ನಡೆಸುವುದೇ ಕಷ್ಟವಾಯಿತು. ದೇವಮ್ಮ ನಿತ್ಯವೂ ಮನೆ ಕೆಲಸ ಮಾಡಿ ಮಕ್ಕಳನ್ನು ಓದಿಸುವ ಪ್ರಯತ್ನ ಮಾಡಿದಳು. ರಾಧಾ ಮತ್ತು ರೇಖಾ ಇಬ್ಬರು ಮಕ್ಕಳು ಕೂಡ ತುಂಬಾ ಚೆನ್ನಾಗಿ ಓದಿ ವಿದ್ಯಾವಂತರಾಗುವ ಹಂಬಲ ಹೊಂದಿದವರಾಗಿದ್ದರು. ನಿತ್ಯವೂ ತಪ್ಪದೇ ಶಾಲೆಗೆ ಹೋಗುತ್ತಿದ್ದರು. ಸ್ವಲ್ಪ ದಿನಗಳ ನಂತರ ತಾಯಿ ದೇವಮ್ಮಳಿಗೆ ಅನಾರೋಗ್ಯ ಸ್ಥಿತಿ ಉಂಟಾಯಿತು. ಆಗ ರಾಧಾ ತನ್ನ ತಾಯಿಯನ್ನು ಜವಾಬ್ದಾರಿಯಿಂದ ನೋಡದೆ ಬರೀ ಓದುವ ಕಡೆ ಗಮನವನ್ನು ಹರಿಸಿದಳು. ಆದರೆ ರೇಖಾ ಮಾತ್ರ ನಿತ್ಯ ಮನೆ ಕೆಲಸ ಮಾಡಿ ಅಮ್ಮನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ತಾಯಿಗೆ ಸಮಯಕ್ಕೆ ಸರಿಯಾಗಿ ಔಷಧ ಕೊಡುವುದು, ಊಟ ಮಾಡಿಸುವುದು ಮಾಡಿ, ಶಾಲೆಗೆ ಹೋಗುತ್ತಿದ್ದಳು. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಆಯಿತು. ಸ್ವಲ್ಪ ದಿನಗಳ ಬಳಿಕ ಶಾಲೆಯಲ್ಲಿ ಪರೀಕ್ಷೆಗಳು ಪ್ರಾರಂಭವಾದವು. ಆಗ ರಾಧಾ ಬರೀ ಪರೀಕ್ಷೆಗೆ ಹೋಗುವುದು ಮನೆಗೆ ಬರುವುದು, ಬರಿ ಸ್ವಾರ್ಥ ಭಾವನೆ ಹೊಂದಿದವಳಾಗಿದ್ದಳು. ಓದುವುದು ಅಷ್ಟೇ ಕೆಲಸ ಮಾಡುತ್ತಿದ್ದಳು. ಆದರೆ ರೇಖಾ ತಾಯಿ ಜೊತೆ ಎಲ್ಲಾ ಕೆಲಸವನ್ನು ಮುಗಿಸಿ. ಪರೀಕ್ಷೆಗೆ ಹೋಗುತ್ತಿದ್ದಳು.
ಪರೀಕ್ಷೆಗಳೆಲ್ಲ ಮುಗಿದವು ಕೆಲ ದಿನಗಳ ನಂತರ ಫಲಿತಾಂಶ ಬಂದಿತು. ಆ ಫಲಿತಾಂಶದಲ್ಲಿ ರಾಧ ಕಡಿಮೆ ಅಂಕಗಳನ್ನ ಗಳಿಸಿದಳು. ರೇಖಾ ಉತ್ತಮವಾದ ಅಂಕಗಳನ್ನು ಗಳಿಸಿದಳು. ಕಾರಣ ರೇಖಾ ಕಷ್ಟದ ಜೊತೆಗೆ ವಿದ್ಯೆಯನ್ನ ಕಲಿತು ಮನೆಯ ಜವಾಬ್ದಾರಿಯೊಂದಿಗೆ ಓದುತ್ತಿದ್ದಳು. ಪ್ರತಿಯೊಬ್ಬರೂ ಕೂಡ ತಂದೆ ತಾಯಿಯನ್ನು ಜವಾಬ್ದಾರಿಯಿಂದ ನೋಡಿಕೊಂಡಾಗ ದೇವರ ಒಲುಮೆ ಸಿಗುತ್ತದೆ. ಅದು ರೇಖಾಳಿಗೆ ದೇವರ ಆಶೀರ್ವಾದದೊಂದಿಗೆ ಅವಳು ಉತ್ತಮ ಅಂಕಗಳನ್ನ ಗಳಿಸಿದಳು . ರೇಖಾ ಮನೆಯ ಹಿರಿಯರನ್ನ ತುಂಬಾ ಗೌರವದಿಂದ ಕಾಣುತ್ತಿದ್ದಳು. ರಾಧಾಳಿಗೆ ಆಗ ಅರಿವಾಯಿತು. ನಮ್ಮ ಕುಟುಂಬ ನನ್ನ ತಾಯಿಯನ್ನು ನಾನು ಕೂಡ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಂಬಲ ಉಂಟಾಯಿತು. ಅದಕ್ಕೆ ದೇವರು ಎಲ್ಲಾ ಕಡೆ ಇರುತ್ತಾನೆ ಹೇಳುವುದು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಹಾಗೂ ತಂದೆ ತಾಯಿಯನ್ನ ಜವಾಬ್ದಾರಿಯಿಂದ ನೋಡಿಕೊಂಡಾಗ ದೇವರು ನಮಗೂ ಕೂಡ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಇದೆ. ಓದುವುದರ ಜೊತೆಗೆ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ತಾಯಿಯೇ ಮೊದಲ ಗುರು. ತಾಯಿಯನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.


Leave a Reply

Back To Top