ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಚಿಂತ್ಯಾಕ ಮಾಡತಿ
ಸುಖ ದುಃಖ ಎಲ್ಲೈತಂತ
ಚಿಂತ್ಯಾಕ ಮಾಡುತಿ ಹಿಂಗ್ಯಾಕ ಕುಂತ
ನಿನ್ನೊಳಗ ನೀ ತಿಳಿದು ನೋಡ
ಮನಸನ್ನ ಚೆಂದಾಗಿ ತೊಳೆದುಬಿಡ//
ಆಸೆ ಎಂಬ ಭೂತ ಬಡಿದು ಬಿಟ್ಟೈತಿ
ನಾನು ನನ್ನದೆಂಬುದು ಹೆಗಲೇರಿ ಕುಂತೈತೆ
ಬಾಳ ಸಂತ್ಯಾದ ಎಲ್ಲಾನೂ ಐತೆ
ಬೇಕಾದ್ದನ್ನಷ್ಟೇ ಕೊಂಡರ ನೆಮ್ಮದಿ ಐತೆ//
ಮಂಗ ಮನಸ ಟೊಂಗಿ ಟೊಂಗಿ ಜಿಗಿತೈತೆ
ಚಂದನ ಎಲ್ಲೆಂದರಲ್ಲಿ ಹಾರಿ ಬಿಡತೈತಿ, ಜ್ವಾಕಿ
ಕಟ್ಟಿ ಹಾಕೋ ಬುದ್ದಿ ನೀ ಕಲಿಯಬೇಕ
ಸುಮ್ಮ ಶಿವನ ಮೇಲೆ ಯಾಕೆ ಸಿಟ್ಟಾಗಬೇಕ //
ಹುಲ್ಲು ಮನುಜ ಜೀವನ ನೆಚ್ಚಲುಬ್ಯಾಡ
ಗಲಿಬಿಲಿ ಯಾಗ ತಪ್ಪಿಸಬ್ಯಾಡ
ಲೋಕದ ಗದ್ದಲದಾಗ ಕಳೆದುಹೋಗಬ್ಯಾಡ
ಸತ್ಯಶುದ್ಧ ಕಾಯಕದ ದಾರಿ ಬಿಡಬ್ಯಾಡ//
ಅಂತೆ ಕಂತೆಗಳಿಗೆ ತಲೆ ಕೊಡಬ್ಯಾಡ
ಅಲ್ಲ ಸಲ್ಲದರ ಬಗ್ಗೆ ಚಿಂತಿಸಿ ಕೆಡಬ್ಯಾಡ
ಸಂತ ಶರಣರ ಮಾತ ಕಡೆಗಣಿಸಬ್ಯಾಡ
ಶಿವದ್ಯಾನ ಹರನಾಮ ಜಪಿಸುದ ಬಿಡಬ್ಯಾಡ//
ಡಾ ಅನ್ನಪೂರ್ಣ ಹಿರೇಮಠ
Super Madam
ಸೂಪರ್
Super