ಅನುವಾದ ಸಂಗಾತಿ
‘ಪ್ರಶ್ನೆ – ಉತ್ತರ.!
ಮಲಯಾಳಂ ಮೂಲ: ನಟರಾಜನ್ ಅವರ ಕವಿತೆ
ಕನ್ನಡಾನುವಾದ :ಐಗೂರು ಮೋಹನ್ ದಾಸ್ ಜಿ
ಒಂದು ಶುಭ ಘಳಿಗೆಯಲ್ಲಿ
‘ಮನಸ್ಸು’ ಒಂದು
ಪ್ರಶ್ನೆಯನ್ನು
ನನ್ನ ಬಳಿ
ಕೇಳಿಬಿಟ್ಟಿತ್ತು….!
ನಿನ್ನ ಸುಂದರ
ಜೀವನದ
ಇಷ್ಟು ಕಾಲದಲ್ಲಿ
ಸಾಧಿಸಿರುವುದು
ಏನು…..?
ಈಗ ಈ
ಪ್ರಶ್ನೆಗೆ ನನ್ನ
ಬಳಿ ‘ಉತ್ತರ’
ಇಲ್ಲ….!
ನನ್ನ ‘ಮರಣ’ದ
ಬಳಿಕ ನಿಮಾ೯ಣವಾಗುವ
ಸಮಾಧಿ ಬಳಿ
ಕೇಳು….!
ಆ ನಿಮಿಷ
ಎಲ್ಲಾಡೆ
ಮೌನ….!!
ಮಲಯಾಳಂ ಮೂಲ: ನಟರಾಜನ್
ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.
ಒಳ್ಳೆಯ ಕವಿತೆಯ ಒಳ್ಳೆಯ ಅನುವಾದ