ನಿಸರ್ಗದ ಅವಿಭಾಜ್ಯ. ಅಂಗ-ಮಣ್ಣು /ಡಿಸೆಂಬರ 4 ಮಣ್ಣಿನ ದಿನಾಚರಣೆ ಅಂಗವಾಗಿ, ಗಾಯತ್ರಿ ಸುಂಕದ್ ಅವರಿಂದ

[


ಮಣ್ಣು ನಿಸರ್ಗದ ಸಮತೋಲನವನ್ನು ಕಾಪಾಡುವಲ್ಲಿ ಮಣ್ಣು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ನಮ್ಮ ದೈನಂದಿನ ಜೀವನದಲ್ಲಿ  ಮಣ್ಣು ಹಾಸು ಹೊಕ್ಕಾಗಿದೆ. ನಮ್ಮಲ್ಲಿ  ಮನುಷ್ಯನ ಮರಣವನ್ನು  ಉಲ್ಲೇಖಿಸುವಾಗ  ಮಣ್ಣಾಗಿ ಹೋದವರು ಎಂದು ಹೇಳುತ್ತೇವೆ. ನಮಗೆ ಸಿಟ್ಟು ಬಂದಾಗ ಮಣ್ಣು ತಿನ್ನು  ಎಂದು ಶಪಿಸುತ್ತೇವೆ. ಮಣ್ಣು ಅಭಿವೃದ್ದಿ ಯ ಸಂಕೇತವೂ ಹೌದು ಮತ್ತು  ಮುಕ್ತಾಯದ್ದ ಸಂಕೇತವೂ ಹೌದು.
ಆದರೆ ಈಗ ನಾವು ಎತ್ತ ಸಾಗುತ್ತಿದ್ದೇವೆ?  ನಮ್ಮ  ಹಪಾಹಪಿಗೆ.  ನಿಸರ್ಗವನ್ನು ಬಲಿ ಪಶು ಮಾಡುತ್ತಿದ್ದೇವೆ. ಅದಕ್ಕೇ ಗಾಂಧೀಜಿಯವರು ಒಂದು ಕಡೆ ಹೇಳಿದ್ದರು “”The nature can fullfill the necessity but not greedyness of man.”
ನಾವು ನಮ್ಮ   ವಿಚಿತ್ರವಾದ ಜೀವನ ಶೈಲಿಯನ್ನು ಇಟ್ಟುಕೊಂಡು ನಿಸರ್ಗಕ್ಕೆ ಕೊಡಲಿ ಪೆಟ್ಟು ಹಾಕುತ್ತಿದ್ದೇವೆ.
ಮನುಷ್ಯನನ್ನು ಬಿಟ್ಟು ಉಳಿದ ಜೀವಿಗಳೆಲ್ಲವು ನಿಸರ್ಗಕ್ಕೆ   ಹೊಂದಿ ಕೊಂಡು ಬಾಳುತ್ತವೆ ಆದರೆ  ಮನುಷ್ಯ ಮಾತ್ರ ನೆಲೆ ಕೊಟ್ಟ ಭೂಮಿಗೆ ಕಂಟಕ ಪ್ರಾಯವಾಗಿದ್ದಾನೆ.

d


ಸಸ್ಯಗಳಿಗೆ ಚೇತೋಹಾರಿ ಆದ ಮಣ್ಣಿಗೆ ಮಾನವ ರಸ ಗೊಬ್ಬರದ ನೆವ ಮಾಡಿ ಕೊಂಡು ಮಣ್ಣಿಗೆ ವಿಷ ಬೆರೆಸು ತ್ತಿದ್ದಾನೆ. ಇದರಿಂದ ಮಣ್ಣು ಫಲವತ್ತತೆ ಕಳೆದು ಕೊಂಡು  ಬಂಜರು ಭೂಮಿ ಆಗುತ್ತಿದೆ..ಎಲ್ಲ ತರಹದ ತ್ಯಾಜ್ಯವನ್ನು ತಂದು ಸುರುವಿ  ಮಣ್ಣಿನಲ್ಲಿ ವಾಸಿಸುವ ಜೀವಿಗಳಿಗೆ ಮೃತ್ಯು ಆಗಿ ಪರಿಣಮಿಸಿದ್ದಾನೆ.
ಭೂಗರ್ಭ ಶಾಸ್ತ್ರದ ಪ್ರಕಾರ ಎಷ್ಟೋ ವರ್ಷಗಳ ನೈಸರ್ಗಿಕ ಕಾರ್ಯಗಳಿಂದ ಮಣ್ಣು ರೂಪು ಗೊಂಡಿದೆ.
ಆದರೆ ಮನುಷ್ಯನ ಕೈಯ್ಯಲ್ಲಿ ಸಿಕ್ಕು ಮಣ್ಣು ಸವೆತಕ್ಕೆ ಒಳಗಾಗಿ ನಿಸರ್ಗಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿದೆ.
ಮಣ್ಣು ಹಾಕಾದರೆ ಬಂಜರು ಭೂಮಿ ಯಾಗಿ ಎಲ್ಲ ಜೀವ ಸಂಕುಲಗಳು ಮಾನವ ಜನಾಂಗಕ್ಕೆ ಹಿಡಿ ಶಾಪ. ಹಾಕುವಂತಾಗಿದೆ.
ಪರಿಸ್ಥಿತಿ ಕೈ ಮೀರುವ ಮುನ್ನ ಈಗಲಾದರೂ ಎಚ್ಚೆತ್ತು ಕೊಂಡು ನಿಸರ್ಗಕ್ಕೆ ನಮ್ಮ ಸೇವೆಯನ್ನು ಸಲ್ಲಿಸೋಣ.
ಏನಂತೀರಾ?

ನಮ್ಮ ಕನ್ನಡ ನಾಡು ಉತ್ತಮ ಮಣ್ಣನ್ನು ಹೊಂದಿದ್ದು ಉತ್ತಮ ಬೆಳೆಗಳನ್ನು ಬೆಳೆದು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.ನಮ್ಮ ಭಾರತದ ಸಂಸ್ಕೃತಿ ನಮ್ಮ ಮಣ್ಣಿನಲ್ಲಿ ಪ್ರತಿಬಿಂಬಿತವಾಗಿದೆ.
“”ದುರ್ಲಭ0 ಭಾರತ ಜನ್ಮ ಎಂದು ಹೇಳಿದ್ದಾರೆ.
ನಮ್ಮ ಸಂಸ್ಕೃತಿಯ ಪ್ರತೀಕವಾದ, ರೈತರ ಜೀವಾನಾಡಿಯಾದ ಮಣ್ಣನ್ನು ರಕ್ಷಿಸಿ ತೋರಿಸೋಣ
ಏನಂತೀರಾ


Leave a Reply

Back To Top