ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

ಬಡತನದಿ ಬೆಂದು ಪುಟಿಯುತ್ತಾ ಬೆಳೆದವಳು/ ಅವರಿವರ ಸೇವೆಯಲಿ ಬದುಕ ಕಳೆದಳು/ ತಡವಾಗಿ ಹೇಗೂ ಮದುವೆಯೊಂದಾದಳು/
ಸರ್ವಸ್ವ ಎಂದುಕೊಂಡವನ ದೌರ್ಜನ್ಯ ಸಹಿಸಿದಳು//

ಅತ್ತೆ ಮಾವನ ಸೇವೆ ಹಗಲಿರುಳು ಮಾಡಿದಳು/ ಹೆಣ್ಣು ಮಗುವೊಂದ ಹಡೆದು ಸಾಕಿದಳು/
ಕುಡಿತಕ್ಕೆ ಶರಣಾದ ಪತಿ ಲೋಕ ತ್ಯಜಿಸಿದರೂ/ ಗಂಡನ ಸಾಲ ತೀರಿಸಲು ಎಲ್ಲವ ತ್ಯಜಿಸಿದಳು//

ಬಂಧು ಬಾಂಧವರಿಂದ ಹಿಂಸೆ ಅನುಭವಿಸಿದರೂ/
ಹೆಣ್ಣು ಮಗಳೆಂದು ಮನೆಯವರು ತೊರೆದರು/
ಅವಮಾನಗಳ ಸಹಿಸಿ ಗಟ್ಟಿತನದಿ ಮಗಳ ಬೆಳೆಸಿದಳು/
ಸಂಸ್ಕಾರ ಕಲಿತ ಮಗಳು ಮಮತೆಯ ಮೆರೆದಳು//

ತಾಯಿಯ ಬದುಕಿನ ಹೋರಾಟ ಕಂಡವಳು/
ತಾಯಿ ಮಡಿಲ ಋಣ ಭಾರ ಮರೆಯದೆ ದುಡಿದಳು/
ಸಮಾಜದ ದುರಿತಗಳ ತಿಳಿದು ನೆರವಾದಳು/
ಸಹಕಾರ ಸೌಧವ ಕಟ್ಟಿ ಸಮಾಜದ ಕಣ್ಮಣಿ ಯಾದಳು//


One thought on “ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

Leave a Reply

Back To Top