ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಹೆರಿಗೆಯ ನೋವಲ್ಲಿ
ಬೇಡೆಂದಳು ಮತ್ತೆಂದೂ,
ಒಂದೇ ವರುಷದಲ್ಲಿ
ಹೊಟ್ಟೆಯಲಿ ಮತ್ತೊಂದು.
*
ದುಗುಡ ಕಳೆಯುವ
ಸಮೀಪದ ಬೆಸುಗೆ
ಇಬ್ಬರ ನಡುವಿನ
ಒಂದು ಮುಗುಳುನಗೆ
*
ಸುಖ ದುಃಖ ಎರಡೂ
ಬಂದು ಹೋದವು ಎದ್ದು
ಯಾವುದೂ ಸ್ಥಿರವಲ್ಲ
ನಿರ್ಲಿಪ್ತತಯೇ ಮದ್ದು.
*
ಸಮಯ ಬಿತ್ತಿದರೆ
ಕಾಲ ಹರಣವಲ್ಲ,
ವಿದ್ಯೆ, ದ್ರವ್ಯಗಳಾಗಿ
ಫಲ ಸಿಗುವದಲ್ಲ!
*
ಹಣ ತೂಕದ ಕಲ್ಲು
ಬಾಳು ಹಣೆ ಬರಹ
ಎರಡೂ ಸಮತೂಕ
ತೋರುತದ ತಕ್ಕಡಿ.
*
ಎಷ್ಟೊಂದು ಅಧಿಕಾರ
ಇಲ್ಲಿಯೇ ಬಿಟ್ಟು ಹೋದ,
ಅಹಂ ಲೋಭ ಬಿಟ್ಟಿದ್ದ
ಅದರ ಪುಣ್ಯ ವೈದ.
—————–
ವ್ಯಾಸ ಜೋಶಿ.