ಕಾವ್ಯ ಸಂಗಾತಿ
ಸವಿತಾ ದೇಶಮುಖ
‘ಬರಡಾಗದಿರಲಿ ಭೂಮಿ’
ಬರಡಾಗದಿರಲಿ ಭೂವಿಯು
ಒಣಗದಿರಲಿ ಗಿಡ-ಮರಗಳು
ಬತ್ತಿ ಹೋಗದಿರಲಿ ಕೆರೆ -ನದಿಗಳು
ಧರೆ ಹತ್ತಿ ಉರಿಯದಿರಲಿ ಮನ-ಮನೆಗಳು
ಇಂಗಿ ಹೋಗದಿರಲಿ ಪರಾಕಾಷ್ಠೆಯ ಪರಾಂಲಂಬನೆಯಲಿ…….
ಎನಿತು ಮುನ್ನಡೆಯ ದಾರಿಯು
ಕ್ಷಣಮಾತ್ರದಲ್ಲಿ ಒಬ್ಬರ ವಿನಾಶವನು
ಇನ್ನೊಬ್ಬ ಮಾಡುವ ತಂತ್ರ -ಯಂತ್ರವು
ಮೆರಗುಗೊಳಿಸುವ ಅಣ ಬಾಂಬುಗಳು
ಮರೆತು- ತೊರೆದು ನಿಂತರು ಮಾನವೀಯತೆಯ…
ವೈಜ್ಞಾನಕತೆಯ ಉತ್ತುಂಗದಲಿ- ಜನಾಂಗವು
ಸತ್ಯ ಅಹಿಂಸೆಯ ಪಾಠ ಅಳಿದೇವು
ನಿತ್ಯ ಬದುಕಿನ ಸತ್ಯಕ್ಕೆ ದೂರ ಸರಿದೆವು ಒಬ್ಬರಿಗೊಬ್ಬರು ಗೆಲ್ಲುವ ಹ್ಯೋದಾಟವು
ಕ್ಷಣ ಮಾತ್ರದಲ್ಲಿ ನೆಲಸಮವಾಗುವೆವು….
ನೋಡು ನೋಡುತಿರಿಯಾಯಿತು
ಬರಡು ನೆಲವು-ಜೀವನ,ಎನಿತು
ಅಬ್ಬರಿಸಿತು ಯಾಂತ್ರಿಕತೆಯ ದಾಳಿಯು
ವಿನಾಶದ ಬಿರುಗಾಳಿ ಎಸುಗಿತು, ಧರ್ಮ
ಧರ್ಮಗಳು ಧುಮ್ಮಿಕ್ಕುವ ತಾಂಡವದಲ್ಲಿ…..
ಯಾಕೆ ಮೌನವಾಗಿ ವೀಕ್ಷಿಸುತ್ತಿರುವೆ
ಪ್ರಕೃತಿ ಮಾತಯೇ.. ಕರುಣೆ ಬಾರದೆ
ನಮ್ಮ ಮೇಲೆ? .ಓ.. ನಾವೇ ಅಲ್ಲವೇ
ವಿನಾಶದ ಭೂತರು ಮೈಮರೆತೆ
ನಿಂತೆವು -ದುರ್ವಿಲಾಸದ ಪ್ರವೃತ್ತಿಯಲಿ….
ಸಮಯ ಸನ್ನಿಹಿತವಾಗಿದೆ ಇನ್ನು
ಹೌದು! ಎಚ್ಚರಗೊಳ್ಳಬೇಕಿದೆ
ಮನೆ ಮನೆಗೊಂದು ,ಮಗು ಮಗುವಿಗೊಂದು
ನೆಟ್ಟು ವೃಕ್ಷವ ಬೆಳೆಸಬೇಕಿದೆ ವನವ,
ನಿರ್ಮಲಗೋಳಿಸಿ ಮನಗಳು ವೃದ್ಧಿಸಬೇಕಿದೆ ಭೂದೇವಿಯ…..
ಹಚ್ಚ ಹಸಿರಿನ ವನಸಿರಿಯು ಮೈದಳೆದು
ನಿಲ್ಲುವಂತೆ ಎತ್ತರಕ್ಕೆ ಹಬ್ಬಲಿ
ಶಾಂತಿಯ ಹಂದರವ ಹಾಸಬೇಕಿದ….
ಸವಿತಾ ದೇಶಮುಖ