ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಚಿಂತಕರ ಬದಲು ವಂಚಕರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು
ಸಾಧಕರ ಬದಲು ಬಾಧಕರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು
ಮಧುಶಾಲೆಯ ಸಾಕಿಯರ ನಲ್ಮೆಯ ಒಡನಾಟಕ್ಕೇನು ಕೊರೆತೆ ಇದೆ ಹೇಳು
ಪ್ರೇಮಿಗಳ ಬದಲು ಕಾಮುಕರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು
ನಯಗಾರಿಕೆಯ ಮೃದು ಮಾತುಗಳು ಹರಿದಾಡುತ್ತಿವೆ ನಿತ್ಯ ವಯ್ಯಾರದಲ್ಲಿ
ನಂಬಿಗಸ್ಥರ ಬದಲು ನಯವಂಚಕರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು
ಹೂದೋಟದಲಿ ಹೂಗಳ ಸುಗಂಧ ಮನಕ್ಕೆ ಉಲ್ಲಾಸದಿ ಹಿತ ನೀಡುತ್ತಿದೆ
ಸ್ನೇಹಿತರ ಬದಲು ಹಂತಕರು ಮಾತನಾಡಿದಾಗ ಈ ಶಹರಕ್ಕೆ ಬೆಂಕಿ ಬಿತ್ತು
ಸರ್ವಧರ್ಮಿಯರು ಸಹೋದರತ್ವ ಭಾಂಧವ್ಯದಲ್ಲಿ ಬಾಳುತ್ತಿದ್ದಾರೆ ಮಾಜಾ
ಶ್ರಮಿಕರ ಬದಲು ಶೋಷಕರು ಮಾತನಾಡಿದಾಗ ಈ ಶರಹರಕ್ಕೆ ಬೆಂಕಿ ಬಿತ್ತು
ಮಾಜಾನ್ ಮಸ್ಕಿ
ಚೆನ್ನಾಗಿದೆ ಮೇಡಂ