ಡಾ.ದಾನಮ್ಮ ಚ. ಝಳಕಿ ಕವಿತೆ-ಬರಗಾಲ

ಬರಗಾಲ ಬಾಯ್ಬಿಟ್ಟಿದೆ
ಭೂಮಿ ಬೆಂದು ಬರಡಾಗಿದೆ
ಕೈಗಾರಿಕೆಗಳ ಹೊಗೆ ಕೇಕೇ ಹಾಕಿದೆ
ಪ್ರಾಣಿಪಕ್ಷಿ ನೀರಿಗಾಗಿ ಪರಿತಪಿಸುತಿದೆ

ವಾಹನಗಳ ಓಡಾಟ
ಪಟಾಕಿಸದ್ದುಗಳ ಹೂಯ್ದಾಟ
ಕೈಗಾರೀಕರಣದ ಸುಳಿದಾಟ
ಬೆಚ್ಚಿಬೀಳಿಸಿದ ಓಜೋನ ಪರದೆಯಾಟ

ಉಷ್ಣತೆಯ ಹೋಯ್ದಾಟ
ಪ್ರಾಣಿಪಕ್ಷಿಗೆ ಪ್ರಾಣ ಸಂಕಟ
ಸಸ್ಯಸಂಕುಲಕೆ ಭೀತಿಯ ಕೂಟ
ಇಡೀ ಜಗದಲಿ ಉಳುವಿಗಾಗಿ ಹೋರಾಟ

ಮಾನವ ಆಟಕೆ ಪ್ರಕೃತಿ ಮುನಿದಿದೆ
ಅತಿಯಾಸೆ ಅಟ್ಟಕ್ಕೇರಿ ಪಾಠ ಕಲಿಸುತಿದೆ
ಜೀವಿಗಳ ದಾಹಕೆ ಉತ್ತರ ಸಿಗದಾಗಿದೆ
ಕಂಗಾಲಾಗಿ ಜೀವ ಚಡಪಡಿಸುತಿದೆ

ಇನ್ನಾದರೂ ಬದುಕು ನೀ ಪ್ರಕೃತಿ ಕೂಸಾಗಿ
ಉಳಿಸು ಭೂಮಿ ಮುಂದಿನ ಪೀಳಿಗೆಗಾಗಿ
ಸವೆಸು ಬದುಕು ನಿಸರ್ಗಕ್ಕಾಗಿ
ಮರಳಿಸು ಪ್ರಕೃತಿ ಸೊಬಗು ಭೂಮಿಗಾಗಿ


Leave a Reply

Back To Top