ಲಹರಿ ಸಂಗಾತಿ
ವಾಣಿಶಿವಕುಮಾರ್
“ಪೆನ್ನಿನ ಮನದಾಳದ ಮಾತುಗಳು”
ಅಂಗನವಾಡಿಯಿಂದ ಶುರುವಾದ್ರೆ,ಕಾಲೇಜಿನ ತನಕ ಅಷ್ಟೇ ಯಾಕೆ ಆಫೀಸಲ್ಲೂ,ಹಸ್ತಾಕ್ಷರಕ್ಕೂ,ಅಭಿನಂದನಾ ಪತ್ರವನ್ನು ಬರೆಯುವುದಕ್ಕೆ ನಾನೇ ಬೇಕಾಗಿತ್ತು.
ಕಿಸೆಯಿಂದ ನನ್ನನ್ನು ಹೊರತೆಗೆದು ನನ್ನನ್ನು ಹಿಡಿದುಕೊಂಡು ಬರೆಯೋಕ್ಕೆ ಪ್ರಾರಂಭಿಸಿದರೆ ಆಹಾ! ಎಂತಹ ಖುಷಿ ಇರುತ್ತಿತ್ತು. ಕೆಲವರು ನನ್ನನ್ನು ಕಿವಿ ಹಿಂದೆ ಇಟ್ಟುಕೊಂಡರೆ,ಮತ್ತೊಬ್ಬರು ಕೈ ಚೀಲದಲ್ಲಿಟ್ಟುಕೊಂಡು ನನ್ನನ್ನು ಹೊತ್ತೊಯ್ಯುತ್ತಿದ್ದರು.
ಹೆಣ್ಣು ಮಕ್ಕಳಂತೂ ಅವರ ಕುರ್ತಾ ಜೇಬಿನಿಂದ ನನ್ನನ್ನು ಹೊರತೆಗೆದು,ನಾಜೂಕಾಗಿ ಹಿಡಿದು ಬರೆಯುತ್ತಿದ್ದರೆ ಇನ್ನೂ ಸ್ವಲ್ಪ ಸಮಯ ಅವರ ಬೆರಳ ತುದಿಯಲ್ಲೇ ನಲಿಯೋಣವೆಂದೆನಿಸುತ್ತಿತ್ತು.
ಆದರೆ ಈಗ ಶಾಲಾ,ಕಾಲೇಜು,ಆಫೀಸಿನ ಸಮಯಕ್ಕೆ ನಾನು ಸೀಮಿತವಾಗಿ ಬಿಟ್ಟಿದ್ದೀನಿ. ಮನೆಗೆ ಬಂದ ನಂತರ ಯಾರೂ ಸಹ ನನ್ನನ್ನು ವಿಚಾರಿಸುವುದೇ ಇಲ್ಲ,ಬದಲಾಗಿ ಎಲ್ಲರ ಹಾಸುಹೊಕ್ಕಾಗಿರುವ ಮೊಬೈಲ್ ಫೋನನ್ನು ಇಟ್ಟುಕೊಂಡು ಅದರಲ್ಲೇ ಬರೆಯಲಾರಂಭಿಸುತ್ತಾರೆ.
ಅದನ್ನು ನೋಡುತ್ತಿದ್ದರೆ ಪುನಃ ನಾಳೆ ಬೆಳಿಗ್ಗೆ ಇವರ ಅನಿವಾರ್ಯಕ್ಕೆ ನನ್ನನ್ನು ಬಳಸುತ್ತಾರಲ್ಲ ಅನ್ನುವ ಸಂಕಟ ಕಾಡತೊಡಗುತ್ತದೆ. ಬಗೆ-ಬಗೆಯ ರೂಪದಲ್ಲಿ,ಕೈಗೆಟುಕುವ ದರದಲ್ಲಿ ನಾನು ಸಿಗುತ್ತೇನೆ
ಆದರೂ ನನ್ನನ್ನು ಸೀಮಿತಾವಧಿಗೆ ಬಳಸುತ್ತಾರಲ್ಲ ಅನ್ನೋದೆ ವಿಷಾದದ ವಿಷಯ. ಹೋಗಲಿ ಬಿಡಿ ಆ ನೆಪದಲ್ಲಾದರೂ ನನ್ನನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಾರಲ್ಲ ಅಷ್ಟೇ ಸಾಕು.
———————————————
ವಾಣಿ ಶಿವಕುಮಾರ್
ವಾಣಿಶಿವಕುಮಾರ್