ಕಾವ್ಯ ಸಂಗಾತಿ
ಸುರೇಶ ತಂಗೋಡ
ರಿಜೆಕ್ಟ್ ಆದ ಕವಿತೆ
ಸಂವಿಂಧಾನದ ತಳಹದಿಯಲ್ಲಿ
ಅಸಮಾನತೆಯ ತೊಲಗಿಸಲು
ಪ್ರತಿಭಟನೆಗಿಳಿದ
ಕವಿತೆ..೧
ಶೃಂಗಾರ,ಛಂದಸ್ಸು, ಅಲಂಕಾರಗಳೆಲ್ಲವ್ವ
ದಿಕ್ಕರಿಸಿ
ಸ್ವತಂತ್ರತೆಯನ್ನು ಘೋಷಿಸಿಕೊಂಡ
ಕವಿತೆ.೨
ರಾಜಕೀಯ ದೊಂಬರಾಟ
ಜಾತಿ-ಮತಗಳ ಎಣಿಯಾಟ
ಎಲ್ಲವನ್ನೂ ಮೀರಿ ನಡೆದ
ಕವಿತೆ.೩.
ನವ್ಯವೂ ಅಲ್ಲದ
ನವೋದಯಕ್ಕೂ ಒಗ್ಗದ
ಎಡ-ಬಲಗಳ ಪಕ್ಕಕ್ಕೆಸರಿಸಿದ
ಕವಿತೆ.೪.
ಒಂದೇ ತತ್ವಕ್ಕೆ ಜೋತು ಬೀಳದ
ವಿಷಯ ವಸ್ತುವಿನ ಆಯ್ಕೆಯ
ಅಧಾಕಾರ ಹೊಂದಿರುವ
ಕವಿತೆ.೫.
ಜಾಗತೀಕರಣ, ಖಾಸಗೀಕರಣ
ಉದಾರೀಕರಣಗಳ
ಕಡು ವೈರಿಯಾದ
ಕವಿತೆ.೬.
ಸ್ರೀವಾದ,ಸಮತಾವಾದ
ಎಲ್ಲ ವೈಚಾರಿಕತೆಗಳ
ಆಚೆಗೆ ವಿಸ್ತರಿಸಿದ
ಕವಿತೆ.೭.
ಇದು ಪೂರ್ವಾಗ್ರಹ ಪೀಡಿತರಿಂದ
ವಿಮರ್ಶಿಸಲಾಗದ
ಯಾರೊಬ್ಬರು ಮೆಚ್ಚದ
ಸಮಾಜ ತಿದ್ದುವ
ಆದರೆ
ಸಮಾಜವೇ ರಿಜೆಕ್ಟ್ ಮಾಡಿದ ಕವಿತೆ.೮.
——————————–
ಸುರೇಶ ತಂಗೋಡ
ಅಂಚೆ ಸಹಾಯಕರು.
ಗದಗ
ತುಂಬಾ ಇಷ್ಟ ಆದ ರಿಜೆಕ್ಟ್ ಮಾಡಲಾಗದ ಕವಿತೆ