ಕಾವ್ಯ ಸಂಗಾತಿ
ನಾರಾಯಣ ರಾಮಪ್ಪ ರಾಠೋಡ
ಭೂತಾಯಿ ಮುನಿಸಿಕೊಂಡಾಳು ….!!
ನಿಲ್ಲು ಹೇ ಮನುಜ ಭೂತಾಯಿ ಮುನಿಸಿಕೊಂಡಾಳು
ನಿನ್ನಯ ದಾಹಕೆ ತಾಯೊಡಲ ಬಗೆದು
ಅದಿರು ಖನಿಜವ ತೆಗೆದು
ಜಲದಾಹದ ನೆಪದಿ ತಾಯ್ ಹೊಟ್ಟೆಯ ಅಗೆದು
ಕೊಟ್ಟಿಹೆ ಸಾವಿರ ನೋವ
ನಿನ್ನ ಹಸಿವ ನೀಗಲು ಬೊಗಸೆ ಅನ್ನ ಕೊಡುವಳು
ನಿನ್ನ ದಾಹ ತಣಿಸಲು ಗಂಗೆ ತುಂಗೆ ಹೆತ್ತಳು
ನೂರ್ಕಾಲ ಬಾಳಲು ತಂಗಾಳಿಯಾಗಿ ಹರಿವಳು
ನಿನಗೆ ನೆರಳಾಗಲು ಗಿಡಮರಗಳ ಕೊಟ್ಟಳು
ನಿನ್ನ ಸೌಖ್ಯ ಕಾಗಿ ಕರುಳು ಹರಿದು ಕೊಟ್ಟಳು
ದೇಹ ಪುಷ್ಟಿಯಾಗಲು ಹಣ್ಣು ಕಾಯಿಕೊಟ್ಟಳು
ನಿನ್ನ ಆನಂದಿಸಲು ಸೌಂದರ್ಯವ ತಳೆದಳು
ನದ ನದಿಗಳು ಸಾಗರ ಸರೋವರಗಳು
ಬೆಟ್ಟ ಗುಡ್ಡ ಸಹ್ಯಾದ್ರಿ ಶಿಖರಗಳು
ಮುತ್ತು ರತ್ನ ವಜ್ರ ವೈಢೂರ್ಯ ಗಭ೯ದೊಳು
ನಿನ್ನ ಕಾಪಿಡಲು ಮಳೆ ಬಿಸಿಲು ತಂಪನ್ನಿತ್ತಳು
ವನಸ್ಪತಿ ಔಷಧಿ ಮದ್ದನು ಮುದದಿ ಕೈಗಿತ್ತಳು
ಹೂವಲ್ಲಿ ಮಧು ಸುಗಂಧಗಳ ಬಚ್ಚಿಟ್ಟಿಹಳು
ನಿನಗೆ ಬೆಳಕಾಗಲು ಸೂರ್ಯನ ಕರೆವಳು
ನಿನ್ನ ದಣಿವ ನೀಗಲು ಸೂರ್ಯನ ಮರೆಯಾದಳು
ನಾರಾಯಣ ರಾಮಪ್ಪ ರಾಠೋಡ
ಉಪನ್ಯಾಸಕರು
ಸರಕಾರಿ ಪದವಿ ಪೂರ್ವ ಕಾಲೇಜು ಸಂಪಗಾಂವ.