ಕೆ ಜೆ ಪೂರ್ಣಿಮಾ
ಎಂದು ಮರೆಯದ ಹಾಡು..
ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ-
ಶ್ರೀ ಗೊ ರು ಚನ್ನಬಸಪ್ಪ :
ದಿ// ಹಿ ಮ ನಾಗಯ್ಯ.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ 20,21,23)
ಗೊ ರು ಚನ್ನಬಸಪ್ಪ ಅವರು ಚಿಕ್ಕಮಂಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಗೊಂಡೇದ ಹಳ್ಳಿಯಲ್ಲಿ ರುದ್ರಪ್ಪ ಗೌಡರ -ಅಕ್ಕಮ ದಂಪತಿಗಳಿಗೆ ಪುತ್ರರಾಗಿ ೧೮-೫-೧೯೩೦ ರಲ್ಲಿ ಹುಟ್ಟಿದರು. ಪತ್ರಿಕಾ ವೃತ್ತಿಬಲ್ಲ ಇವರು’ ಜಾನಪದ ಜಗತ್ತು ‘ ‘ ಪಂಚಾಯತ್ ರಾಜ್ಯ ‘ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ‘ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ.೧೯೯೭ ರಿಂದ೧೯೯೫ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ೧೮ ನೇ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ(೧೯೯೩), ಮಂಡ್ಯ(೧೯೯೪), ಮುಧೋಳಗಳಲ್ಲಿ (೧೯೯೩)೬೨, ೬೩, ೬೪ ನೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಇವರ ಕೆಲವು ಕೃತಿಗಳು ಹೀಗಿವೆ,
~ ಕರ್ನಾಟಕ ಪ್ರಗತಿಪಥ, ಸಾಕ್ಷಿ ಕಲ್ಲು, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ಕರ್ನಾಟಕ ಜನಪದ ಕಲೆಗಳು, ಹೊನ್ನಬಿತ್ತೇವು ನೆಲಕ್ಕೆಲ್ಲ. ಇತ್ಯಾದಿ.
ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಹಿ ಮ ನಾ ಎಂದೇ ಪರಿಚಿತರಾಗಿದ್ದ ನಾಗಯ್ಯನವರು ನನಗೆ ಪರಿಚಯವಾದದ್ದು ೧೯೫೦ ರಲ್ಲಿ. ಅವರು ನಮ್ಮ ಊರಿಗೆ( ಗೊಂಡೇದಹಳ್ಳಿ ಚಿಕ್ಕಮಂಗಳೂರು ಜಿಲ್ಲೆ) ಬಂದಿದ್ದಾಗ ಆಗತಾನೆ ಬೆಳಕಿಗೆ ಬಂದಿದ್ದು ಅವರ ‘ಬಳ್ಳಾರಿಯ ಬೆಳಗು ‘ ಕವನ ಸಂಗ್ರಹದ ಕೆಲವು ಕವನಗಳನ್ನು ಓದಿದ್ದರು.
ಆಗ ಅಂಕುರಿಸಿದ ಪರಿಚಯ ಯೋಗ -ಯೋಗವೆಂಬಂತೆ ನಾವಿಬ್ಬರೂ ಬೆಂಗಳೂರಿನಲ್ಲಿ ನೆರೆಹೊರೆಯವರಾಗಿ ನೆಲೆಸಿದ ನಂತರ ತುಂಬಾ ನಿಕಟರಾದರು ಅದು ಎಷ್ಟು ನಿಕಟವಾಯಿತು ಎಂದರೆ ಅನಿವಾರ್ಯ ಹೊರತಾಗಿ ನಾವಿಬ್ಬರೂ ಪರಸ್ಪರ ಭೇಟಿ ಮಾಡಿ ಸುಖ ದುಃಖ ಹಂಚಿಕೊಳ್ಳದ ದಿನಗಳೇ ಇರಲಿಲ್ಲ ಎನ್ನುವಷ್ಟು. ಬಳ್ಳಾರಿ ಪ್ರದೇಶವು ವಿಜಯನಗರ ಸಾಮ್ರಾಜ್ಯದ ಗಂಡು ಮೆಟ್ಟಿನ ನಾಡು ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಎರಡನೆಯ ಹರಿಹರ,ಎರಡನೆಯ ದೇವರಾಯ, ಸಾಳ್ವ ನರಸಿಂಹ, ಕೃಷ್ಣದೇವರಾಯ ಮೊದಲಾದ ಪ್ರಭುಗಳ ಆಡಳಿತದಲ್ಲಿ ಜಗದ್ವಿಖ್ಯಾತಿ ಪಡೆದುದ್ದನ್ನು ಮರೆಯುವಂತಿಲ್ಲ. ಇಡೀ ಭಾರತವು ತತ್ತರಗೊಂಡಿದ್ದ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬಂದ ಕೀರ್ತಿ ವಿಜಯನಗರ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. ಅಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಕನ್ನಡ ಜಾಗೃತಿ ಉಂಟಾದ ಮೇಲೆ ಅನೇಕ ಬರಹಗಾರರು ಸಾಹಿತಿಗಳು ಕಾಣಿಸಿಕೊಂಡರು. ಕಥೆ, ಕವನ, ಕಾದಂಬರಿಗಳನ್ನು ರಚಿಸಿ ಹೆಸರು ಗಳಿಸಿದ್ದಾರೆ. ತರುಣ ಕವಿಗಳು ಸಾಮೂಹಿಕವಾಗಿ ಕಾವ್ಯ ಕುಸುಮಾಂಜಲಿಗಳನ್ನು ಪ್ರಕಟಿಸಿ ಹೆಸರು ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ತೊಡಗಿರುವ ಅನೇಕ ಸಾಹಿತಿಗಳು ನಾಡಿನಾದ್ಯಂತ ಹೆಸರು ಮಾಡಿದ್ದಾರೆ, ಸಂತೋಷದ ಪಟ್ಟಿ ಬಹಳ ದೊಡ್ಡದಾದ್ದರಿಂದ ಎಲ್ಲರ ಹೆಸರುಗಳನ್ನು ಹೇಳುವುದು ಕಷ್ಟ ಆದ್ದರಿಂದ ಆ ಪ್ರಯತ್ನ ಕೈಬಿಟ್ಟು ಮುಖ್ಯವಾಗಿ ಹಿರಿಯ ಪತ್ರಕರ್ತರು, ಜನಪ್ರಿಯ ಸಾಹಿತಿಗಳು, ಕವಿಗಳು, ಕನ್ನಡ ಕಾರ್ಯಕರ್ತರು, ರಾಜಕಾರಣಿ, ಸಮಾಜ ಸೇವಕರಾದ ಶ್ರೀ ಹಿರೇಕುಂಬಳಗುಂಟೆ ನಾಗಯ್ಯ ಅವರೊಂದಿಗೆ ಗೊ ರು ಚ ಅವರ ಆತ್ಮೀಯ ಒಡನಾಟದ ಬಗ್ಗೆ ಒಂದು ಇಣುಕು ನೋಟ, ಗೆಳೆತನದ ಸಿರಿ ಗೆಳೆಯ ಪತ್ರಕರ್ತ ಸಾಹಿತಿ ಶ್ರೀ ಹಿ ಮ ನಾಗಯ್ಯ ಶರಣ ಜೀವಿಯಾದ ಇವರ ಸ್ಮರಣೆ ಒಂದು ಅನಿರ್ವಚನೀಯ. ಶ್ರೀ ಹಿ ಮ ನಾ ಅತ್ಯಂತ ಆತ್ಮೀಯ ಗೆಳೆಯ, ಗೆಳೆಯ ತೀರಿದಂದಿನ್ನಿನಿಂದ ಅವರ ಸಹೋದರ ಶ್ರೀ ಎಚ್ಎಂ ಮರಳು ಸಿದ್ದಯ್ಯನವರಲ್ಲಿ ಗೆಳೆಯನನ್ನು ಕಂಡವರು. ಶ್ರೀ ಗೊ ರು ಚ ಅವರಿಗೆ ಹಿ ಮ ನಾ ಅವರು ಎಷ್ಟು ಆತ್ಮೀಯರೋ ಅವರ ಸಹೋದರ ಡಾ. ಎಚ್ ಎಮ್ ಮರುಳು ಸಿದ್ದಯ್ಯ ಅವರಾಗಿದ್ದರು. ಶ್ರೀಯುತ ಮರಳು ಸಿದ್ದಯ್ಯನವರು ದಿ // ಹಿ ಮ ನಾ ಅವರ ಪರಿಚಯ ಪುಸ್ತಕೆಗೆ ನಾಲ್ಕು ಮೊದಲ ಮಾತು ಬರೆಯಬೇಕೆಂದು ಅಪೇಕ್ಷಿಸಿದಾಗ ಗೊ ರು ಚ ಹೇಳಿದರು ಅವರ ಅಪೇಕ್ಷೆ ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ಕಾರಣ ಈ ಇಬ್ಬರು ಸಹೋದರರು ಬಲು ಆತ್ಮೀಯರು ಅದರಲ್ಲಿ ನಾಗಯ್ಯನವರನ್ನು ಕಳೆದುಕೊಂಡಾಗ ಅವರನ್ನು ಅವರ ಸಹೋದರ ಮರಳು ಸಿದ್ದಯ್ಯನವರಲ್ಲಿ ಕಂಡುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಿ ಮ ನಾ ಅವರು ಸ್ನೇಹ ಸಂಬಂಧಕ್ಕೆ ಸಜ್ಜನಿಕೆಯ ಸಂಪನ್ನತೆಗೆ ಕನಿಕರದ ಕರುಳಿಗೆ ಒಂದು ಅಪರೂಪದ ಅನುರೂಪ. ಸೃಜನಶೀಲ ಸಾಹಿತ್ಯ ಪ್ರತಿಭೆ ಗಂತೂ ಅವರದು ಆಧುನಿಕ ಕಾವ್ಯ ಜಗತ್ತು ಮರೆಯಬಾರದ ಹೆಸರು. ಆದರೆ ಅವರ ಸ್ಮರಣೆ ಸಾಲದು ಎಂಬುದು ನೋವಿನ ಸಂಗತಿ. ನಿಸರ್ಗ ಪ್ರೇಮಿಯಾಗಿದ್ದ ಹಿ ಮಾ ನ ಅವರ ಬದುಕೇ ಪ್ರಕೃತಿಯನ್ನ ಪ್ರತಿನಿಧಿಸಿತ್ತು. ವಿಶೇಷವೆಂದರೆ ತನ್ನನ್ನು ಯಾರೇ ವಿಕೃತಗೊಳಿಸಿದರು ಅವರ ಮೇಲೆ ಯಾವುದೇ ಸೇಡು ತೀರಿಸ ಹೋಗದಿರುವುದು ‘ ತನ್ನ ಕಡಿ ವರ್ಗೆ ತಣ್ಣೆಳಲೀವ ಮರದಂತೆ ‘ ಹಿ ಮ ನಾ ಅವರ ಸ್ವಭಾವ ಪ್ರಕೃತಿಯ ಐದು ತತ್ವಗಳು ಅವರಲ್ಲಿ ಸಂಪ್ರಾ ಪ್ತಗೊಂಡಿದ್ದವು. ಭೂಮಿಯ ಸಹನಶೀಲತೆ, ನೀರಿನ ನಿರ್ಮಲತೆ, ಅಗ್ನಿಯ ಉಜ್ವಲತೆ, ವಾಯುವಿನ ಚಲನಶೀಲತೆ, ಆಕಾಶದ ವಿಶಾಲತೆ ಇವುಗಳ ಮೊತ್ತವೇ ಅವರಾಗಿದ್ದರೆಂದರೆ ಹೆಚ್ಚು ಹೇಳಿದಂತೇನಲ್ಲ. ಹಿ ಮ ನಾ ಎಂದು ಯಾರೊಡನೆಯೂ ವೃಥಾ ಸೆಣಿಸಿದವರಲ್ಲ. ಯಾರು ಅವರೊಡನೆಯೂ ಸಣಿಸಲಿಲ್ಲ, ಒಂದು ವೇಳೆ ಸೆಣಿಸಬೇಕೆಂದವರೂ ಅಲ್ಲಮನ ಮೇಲೆ ಖಡ್ಗ ಬೀರಿದ ಗೋರಕ್ಷಕನ ಅನುಭವ ಪಡೆದವರೆಂದೇ ಹೇಳಬೇಕು. ನಾನು ಸರಸದಿಂದ ಒಮ್ಮೊಮ್ಮೆ ಅವರಿಗೆ ‘ನೀವು ಶೂನ್ಯ ಪೀಠಾದಿಷ್ಟರು ‘ ಎನ್ನುತ್ತಿದ್ದೆ, ಅದಕ್ಕೆ ಅವರು ತಮ್ಮ ಕವಿ ಸಹಜ ನುಡಿಗಳಲ್ಲಿ ಆ’ ಶೂನ್ಯವದು ಬರಿದಲ್ಲ ಕಣ್ಗೆ ಕಾಣುವುದಿಲ್ಲ ಶೂನ್ಯವದು ಸರ್ವಸ್ವ ಅದು ಬಿಟ್ಟು ಬೇರಿಲ್ಲ ಎನ್ನುತ್ತಿದ್ದರು ‘ ಜೀವಮಾನದಲ್ಲಿ ತುಂಬಾ ಕಷ್ಟ ಅನುಭವಿಸಿದ ಜೀವಿ ಹಿ ಮ ನಾ ಅವರು ಬೆಂದ ಕಷ್ಟದ ಕುಲುಮೆಯ ಕಾವು ಎಷ್ಟು ತೀವ್ರವಾಗಿತ್ತು ಎಂಬುದನ್ನು ತಮ್ಮ ಕರುಳು ಕರಗಿಸುವ ಅವರ ಒಂದು ಕವನದ ಈ ಸಾಲುಗಳು ಹೇಳುತ್ತವೆ.
ಬೆಳಕು ಹರಿಯದಿದ್ದರೂ ಒಳಿತು ಕತ್ತಲೆನಗೆ ನೆಮ್ಮದಿ.
ಹಗಲು ಹೆಡೆಯನೆಲ್ಲ ಬಿಚ್ಚೆ, ಸುತ್ತಿ ಸುಳಿವ ದುರ್ವಿಧಿ.
ಬದುಕು ಎದೆಗೆ ತಿವಿದ ಶೂಲ, ಸಾವು ಜೀವ ಸನ್ನಿಧಿ.
ಅತ್ತ ಇತ್ತ ತಿರುಗಲೆಂತು, ಮುಳ್ಳು ಹಾಸು ಇಬ್ಬದಿ.
ಬಾಳು ಹಾಳು ನಿತ್ಯ ಗೋಳು, ಮುಟ್ಟಲೆಂದು ಆ ತುದಿ?
ಕಣ್ಣ ಮುಚ್ಚಲೆಂತು ಹೇಳು,
ಒತ್ತಬೇಕು ಈ ತಿದಿ!
ಇಂತಹ ನೋವಿನಿಂದ ನರಳಿದರು ಹಿ ಮ ನಾ ಅವರು ಆ ನೋವನ್ನು ಎದುರಿಸುವ ಆತ್ಮವಿಶ್ವಾಸವನ್ನು ತಾಳಿದ್ದಾರೆ.
ವಿಷವ ನೀಡು ನಾನು, ಅಮೃತ ನನ್ನ ಚೇತನ.
ಸೆಳೆದು ಚುಚ್ಚು ಅಲುಗಿ ನಾನು, ವಜ್ರ ನನ್ನ ಭಾವನ.
ತಲೆಯ ಮೆಟ್ಟಿ ನಿಲುವೆ ನಾನು, ನನ್ನ ಹೆಜ್ಜೆ ಮಜ್ಜನ.
ಸೆಣಸು ಮತ್ತೆ ಗೆಲುವೆ ನಾನು, ಚಿಲುಮೆ ನನ್ನ ಚೇತನ.
ಹೀಗೆ ವಿಧಿಗೆ ಸವಾಲು ಹಾಕುತ್ತಲೇ,ಬದುಕಿನ ತಿದಿ ಒತ್ತುತ್ತಲೇ ಇದ್ದ ಈ ಜೀವಿಯಿಂದ ಮೂಡಿ ಬರುತ್ತಿದ್ದ ಮಾತುಗಳೆಲ್ಲ ಕಾವ್ಯರೂಪವೇ ಆಗಿರುತ್ತಿದ್ದವು. ಅವರ ಕಾವ್ಯ ಪ್ರಭೇಯ ವ್ಯೂಮ ಸಾಮರ್ಥ್ಯಕ್ಕೆ ಅವರ ‘ಭವ್ಯ ಭಾರತ ಭಾಗ್ಯೋದಯ’ ಮಹಾಕಾವ್ಯ ಸಾಕ್ಷಿ. ದುರಾದೃಷ್ಟ ಅದು ಪೂರ್ಣಗೊಳ್ಳದೆ ಉಳಿದಿದ್ದು. ಹಿ ಮ ನಾ ಅವರ ಆರೇಳು ಕವನ ಸಂಗ್ರಹಗಳು ಬಂದಿದ್ದರೂ ಅವರ ಅಧ್ಯಯನ ತಪಸ್ಸೆಲ್ಲಾ ‘ಭವ್ಯ ಭಾರತ ಭಾಗ್ಯೋದಯಕ್ಕೆ’ ಮೀಸಲಾಗಿತ್ತು. ಬಹುಶಃ ಈ ಕಾವ್ಯದ ಪ್ರತಿಯೊಂದು ಸಾಲನ್ನು ನನ್ನ ಮುಂದೆ ಓದಿರಬೇಕು ಅವರ ಕಲ್ಪನೆಯ ಪ್ರಕಾರ ಆ ಮಹಾ ಕಾವ್ಯ ೩000 ಪುಟಗಳ, ೯೦, ೦೦೦ ಸಾಲುಗಳಲ್ಲಿ ಮೂಡಿ ಬರಬೇಕಿತ್ತು. ಅದರಲ್ಲಿ ಮೂರನೆಯ ಒಂದು ಭಾಗದಷ್ಟು ಆಗುವಷ್ಟರಲ್ಲಿ ವಿಧಿ ಅವರನ್ನು ನಮ್ಮಿಂದ ಕಸಿದುಕೊಂಡು ಬಿಟ್ಟಿತು. ಸಿದ್ಧವಾಗಿದ್ದಷ್ಟನ್ನಾದರೂ ಅವರ ಪತ್ನಿ ಸರ್ವಮಂಗಳಮ್ಮ ಮತ್ತು ಮಕ್ಕಳು ಪ್ರಕಟಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಿ ಮ ನಾ ಸಮರ್ಥ ವಚನಕಾರರು ಹೌದು, “ಸರ್ವೇಶ್ವರ “ ಅಂಕಿತದ ಅವರ ೧೨೧ ವಚನಗಳು ವಾಸ್ತವವಾಗಿ ಜೀವನ ಸಂದೇಶ ಸಾಲೋಕ್ತಿಗಳೆಂದು ಹೇಳಬಹುದು. ಉದಾಹರಿಸುವುದಾದರೆ :
ಯಾರ ಕಷ್ಟಕ್ಕೆ ಯಾರು, ಯಾರ ದುಃಖಕ್ಕೆ ಯಾರು!
ಯಾರ ಸುಖಭೋಗಕ್ಕೆ ಭಾಗಿ ಯಾರು?
ಯಾರ ಸಂತೈಸಲ್ಕೆ, ಯಾರ ಕಣ್ಣಿನ ನೀರು,
ಯಾರಿಂಗೆ ಯಾರುಂಟೊ ಸರ್ವೇಶ್ವರ!.
ಗೆಳೆಯ ಹಿ ಮ ನಾ ಅವರ ಜೀವನ ದರ್ಶನ ಹಿಮಾಲಯ ಕಿರುಹೊತ್ತಿಗೆಯನ್ನ ಬಿ ಎಂ ಪ್ರಭುದೇವ ಅವರು ಬರೆದಿದ್ದು ಅದರಲ್ಲಿ ಪರಿಚಯ ಪುಸ್ತಕ ನಾಲ್ಕು ಮಾತುಗಳನ್ನು ಆಡಿದ್ದು ಸುಕೃತವೇ ಸರಿ. ಹಿ ಮ ನಾಗಯ್ಯನವರನ್ನು ಕಳೆದುಕೊಂಡು 25ನೇ ವರ್ಷದ ಪುಣ್ಯ ಸ್ಮರಣೀಯ ಸಂದರ್ಭದಲ್ಲಿ ಹಿ ಮ ನಾ ಅವರ ಕವನಗಳ ಸಮಗ್ರ ಸಂಕಲನಗಳ ಪುಸ್ತಕ ಬಿಡುಗಡೆ ಮಾಡಿ ಸಮಗ್ರ ಕವನಗಳ ವಿಶ್ಲೇಷಣೆಯನ್ನು ಮಾಡಿದ್ದು ನನ್ನ ಪುಣ್ಯ ಭಾಗ್ಯವೇ ಸರಿ. ನಿನಗೊಂದು ತಿಳಿ ಮಾತು ಅದರಲ್ಲಿ೧೨೧ ವಚನಗಳು ಸರ್ವೇಶ್ವರ ಅಂಕಿತದಿಂದ ರಚನೆಯಾಗಿದ್ದು ಕೆಲವೊಂದನ್ನು ಅರ್ಥೈಸಿ ತಿಳಿಸಿದ್ದೇನೆ ಮುಖ್ಯವಾಗಿ, ಮೆಚ್ಚಿನಹಳ್ಳಿ ಮೆಚ್ಚಿನ ತಾಯಿ ಕವಿತೆಯನ್ನ ಓದಿ ಕವಿತೆಯಾಳ ವಿಸ್ತಾರವನ್ನು ಮೆಲುಕು ಹಾಕಿದೆ. ಇನ್ನು ಮುಖ್ಯವಾಗಿ ಮಳೆರಾಯನಿಗೆ ಕರೆ, ನೀವೆಲ್ಲ ನಮ್ಮವರೇ ತುಂಬು ಅರಳಿದ ಬೇವು ಎಂಬ ಕವಿತೆಯ ವಿಶ್ಲೇಷಣೆ, ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧಿ ಬೀರಿದ ಪ್ರಭಾವ ಇನ್ನಿತರ ಕವಿತೆಗಳ ವಿಶ್ಲೇಷಣೆಯನ್ನ ಮಾಡಿದ್ದೇನೆ. ಪತ್ರಕರ್ತ ಕವಿ ಹಿ ಮಾ ನಾ.ಅವರಿಗೆ ಸಂಗೀತ ಮತ್ತು ಗಮಕ ಗಾಯನ, ಭಕ್ತಿ ಪ್ರಧಾನ ಶಾಸ್ತ್ರೀಯ ಸಂಗೀತ ಪ್ರಿಯವಾಗಿದ್ದು ಈ ಪುಣ್ಯ ಸ್ಮರಣೆಯಲ್ಲಿ ಅದನ್ನ ಆಯೋಜಿಸಿದ್ದು ಅತ್ಯಂತ ಅರ್ಥಪೂರ್ಣವಾಗಿದೆ.
ಗೊ ರು ಚ ಅವರ ಮಾತಿನಲ್ಲಿ ಹೇಳುವುದಾದರೆ ಹಿ ಮ ನಾ ಅವರು ನಮ್ಮ ಜೊತೆ ಇಲ್ಲ ಎಂದೇ ಹೇಳಲು ಧನಿ ಇಲ್ಲ, ಕಾರಣ 50 ವರ್ಷಗಳ ಕಾಲ ಒಡನಾಡಿಯಾಗಿದ್ದೇನೆ, ಯೋಗ ಯೋಗ ಎಂಬಂತೆ ಬೆಂಗಳೂರಿನ ಜಯನಗರ ೯ನೇ ಬ್ಲಾಕ್ ನಲ್ಲಿ ನೆರೆಹೊರೆ ಮನೆಯವರಾಗಿದ್ದು ಪ್ರತಿದಿನ ಹೆಚ್ಚು ಕಡಿಮೆ ಇಲ್ಲಿದ್ದರೆ ಅಲ್ಲಿ ಅಲ್ಲಿದ್ದರೆ ಇಲ್ಲಿ ಎಂಬಂತೆ ಅಥವಾ ೨ ದಿನಕ್ಕೊಂದು ಬಾರಿಯಾದರೂ ಸಂಧಿಸುವ ಚರ್ಚಿಸುವ ಜೊತೆಗೆ ಅವರು ಬರೆದಂತಹ ಮಹಾಕಾವ್ಯವನ್ನು ಬರೆಯುವಾಗ ತಾವು ಪ್ರತಿನಿತ್ಯ ಬರೆದಂತಹದ್ದನ್ನು ಒಂದು ಸಾರಿ ಓದುವ ಗೆಳೆತನವನ್ನು ಹೊಂದಿದ್ದರು, ಹಿ ಮ ನಾ ಅವರ ಮನೆಗೆ ಹೋದಾಗಲೂ ಅವರ ಎದುರಿಗೆ ಹಿ ಮ ನಾ ಒಂದು ಸಾರಿ ಓದಬೇಕು ಗೊ ರು ಚ ಅವರು ಕೇಳಬೇಕು ಹೀಗೆ ಅದೇನೋ ಅನಿರ್ವಚನೀಯವಾದ ಒಂದು ಸಂಬಂಧ ಇವರಿಬ್ಬರಲ್ಲಿ.
ಕೊನೆಯದಾಗಿ ಗೊ ರು ಚೆನ್ನಬಸಪ್ಪನವರು ಕವಿ ಪತ್ರಕರ್ತ ಸಾಹಿತಿ ಹಿ ಮ ನಾಗಯ್ಯನವರನ್ನು ಪ್ರಚಾರ ಮಾಡಿದಷ್ಟು ಮತ್ತಾರು ಮಾಡಿಲ್ಲ, ಅವರು ಹೋದ ಯಾವುದೇ ಕಾರ್ಯಕ್ರಮದಲ್ಲಾಗಲಿ ಹಿ ಮ ನಾಗಯ್ಯನವರ ಕವನ ಓದುವುದು ಮತ್ತೆ ಅವರನ್ನು ಅವರ ಗೆಳೆತನವನ್ನು ಕೊಂಡಾಡುವುದು ಸರ್ವೇಸಾಮಾನ್ಯ ಅನ್ನುವಂತಿದೆ, ಉತ್ಪ್ರೇಕ್ಷೆ ಎನ್ನಲಾಗದೆ ಗೊ ರು ಚೆನ್ನಬಸಪ್ಪನವರು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ ಅವರ ಹೃದಯ ಮಾತಿನ ಗೆಳೆಯ ಹಿ ಮ ನಾಗಯ್ಯ ಅವರನ್ನು ನೆನೆಯದೆ ತಮ್ಮ ಭಾಷಣ ಮುಗಿಸಿದ್ದಿಲ್ಲ, ಅಂದರೆ ಕೃಷ್ಣ -ಸುಧಾಮ.ಕರ್ಣ- ದುರ್ಯೋಧನರ ಗೆಳೆತನ ಅವರಲ್ಲಿ ಇತ್ತು ಎಂಬುದು ಅವರ ಮಾತಿನಿಂದ ಅರ್ಥವಾಗುತ್ತದೆ.
————————-
ಕೆ ಜೆ ಪೂರ್ಣಿಮಾ\