ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು

ಮನದ ಬೇಗುದಿಯ ಮರೆತು ಹೇಗಿರಲಿ
ಕನಸು ನುಚ್ಚು ನೂರಾಗಿದೆ
ತನುವು ಬಳಲಿ ಬೆಂಡಾಗಿ ಹೋಗಿರಲು
ಜನುಮ ವ್ಯರ್ಥ ಎನಿಸಿದೆ

ನೂರು ಆಸೆಯು ಎದೆಯ ತುಂಬಲು
ಬೇರು ಬಿಟ್ಟಿದೆ ಆಳಕೆ
ಸೂರು ಕಳಚುತ ಜಾರುತ ಬಿದ್ದಿರಲು
ಗುರಿಯಾಗಿದೆ ಶಾಪಕೆ

ರೆಕ್ಕೆ ಮುರಿದ ಹಕ್ಕಿ ಹಾರಲಾಗದೆ
ಮೂಕ ರೋಧನೆ ಮಾಡಿದೆ
ದುಃಖ ಮರೆಯುತ ನೆಲದಿ ಹೊರಳಿದೆ
ಸುಖದ ಭಾವನೆ ನರಳಿದೆ

ಬಯಸಿ ಬಂದ ಬದುಕು ಬವಣೆಯ
ತೋಯಿಸಿ ಮುಳುಗಿ ಹೋಗಿದೆ
ಮಾಯೆಯ ಮುಸುಕಲಿ ಬೆಳಕು ಕಾಣದೆ
ಛಾಯೆಯಾಗಿ ಕಾಡಿದೆ


Leave a Reply

Back To Top