ನಾಗರಾಜ ಬಿ.ನಾಯ್ಕ ಅವರ ಕವನ’ಜಗದ ಓಟ’

ಅದೆಷ್ಟು ಧಾವಂತ
ಬದುಕಿನ ನಡಿಗೆಗೆ
ಮನುಷ್ಯ ನಡೆದಷ್ಟೂ
ದೂರ ಹತ್ತಿರ
ಅಂತರ ಕಾಣದ ಓಟ
ಸಾಗದ ದಾರಿ
ಕಾಣದ ತಿರುವು
ವಿಚಿತ್ರ ನೋಟ
ಭಾವ ಇರದ ಮುಖದಗಲ
ಸಲಿಗೆ ನೋಟ
ಸಹಜ ಮಾತು ಮರೆತ
ಈ ಜಗ ಒಂಟಿ
ಮರದ ತುಂಬಾ
ಹಾಡಿನ ತೋರಣ
ಮನುಜ ಮಾತ್ರ
ನಿಂತೇ ಇರುವ
ಸುತ್ತ ನಡೆವ ಓಟಕೆ
ನೋವು ನಲಿವ
ಹಿಡಿದಿಟ್ಟು ಸುಮ್ಮನೆ
ಸಾಗುವ ಅವನಷ್ಟಕ್ಕೆ
ಸಿಕ್ಕ ನಗುವ
ಆರಿಸಿಕೊಂಡರೆ
ಜೀವ ಹಗುರ
ಮುಖದ ಅಂದ
ಮಾತಾದರೆ
ದಿನವೂ ಸುಂದರ


Leave a Reply

Back To Top