ಡಾ. ಮಹೇಂದ್ರ ಕುರ್ಡಿ ಅವರಕವಿತೆ-ಬತ್ತಿದ_ಆಸೆ

ಆಸರೆ ಬಯಸಿದ ಜೀವ
ಮಗನ ಬೆಳೆಸಿತು ನೋಡ
ಇಳಿ ವಯಸ್ಸಿನಲಿ ತನಗೆ
ಆಸರೆಯ ಊರುಗೋಲಾಗಲೆಂದು.

ಮಡಿಲಲಿ ಹೊತ್ತು ತುತ್ತ ಇತ್ತು
ವಿದ್ಯೆಯಿತ್ತು ಸಂಸ್ಕಾರವ ಕೊಟ್ಟು
ಬೆಳಸಿದರು ಮಗನ ನಲಿಯುತ
ಕುಲ ಕೀರ್ತಿ ಬೆಳಗಲೆಂದು.

ಮಗನ ಬೆಳಸಿದ ಜೀವ
ಮದುವೆ ಮಾಡಿತು ನೋಡ
ವಂಶ ಕೀರ್ತಿ ಬೆಳಗಲೆಂದು
ಮನೆತನವ ಉಳಿಸಲೆಂದು.

ಜೊತೆಯಾದ ಸತಿಗೆ
ಒಲಿದಿತ್ತು ಮನವು
ಮರೆತಿತ್ತು ಹೆತ್ತ ಕರುಳ
ಪ್ರಣಯದ ಹಾದಿಯಲಿ.

ಮಗನ ಬೆಳೆಸಿದ ಜೀವ
ಮರುಗಿ ತಾಳದೇ ನೋವ
ಸವೆಸಿ ಮುಗಿಸಿತು ಬದುಕು
ನನಸಾಗದೇ ಹೋಯ್ತು ಕನಸು..


One thought on “ಡಾ. ಮಹೇಂದ್ರ ಕುರ್ಡಿ ಅವರಕವಿತೆ-ಬತ್ತಿದ_ಆಸೆ

Leave a Reply

Back To Top