ಕಾವ್ಯ ಸಂಗಾತಿ
ಗೋನವಾರ ಕಿಶನ್ ರಾವ್.ಹೈದರಾಬಾದ್
‘ಪುಸ್ತಕ ಪ್ರೇಮಿಯ ಸ್ವಗತ’
ಪುಸ್ತಕ ದಿನದ ಆಚರಣೆ
ಅದೆಂದೋ ಮುಗಿದಿದ್ದರೂ
ಅದರ ಗುಂಗು ಇನ್ನೂ ಇದೆ.
ನಿನ್ನೆ ಲೈಬ್ರರಿಯಲ್ಲಿ,
” ನಿನ್ನೆ ಇಂದಾದದ್ದು ” !!
ಇಂದು ಯಾವ “ದಿನ” ?
ನಿನ್ನೆ ಓದಿದನು ಮೆಲಕು
ಹಾಕುತಿರುವೆ
ಇಂದು ಹೊಸ ಪುಸ್ತಕದ ಪುಟಗಳನ್ನು ತಿರುವುತಿರುವೆ
ಹೊರ ಲೋಕ ಹೊರೆಯಾಗಿ
ಹಗುರಾಗಲು
ಮೊರೆ ಹೊಕ್ಕಿರುವೆ
ಪುಸ್ತಕ ಪ್ರಪಂಚ!
ಎಲ್ಲಿರುವನೋ ಎಂಬುದು
ತಿಳಿಯದ ತಾದಾತ್ಮ್ಯತೆ
” ಲೈಬ್ರರಿ ಕಟ್ಟಡದೊಳಗೊ , ಕಟ್ಟಡವು ಲೈಬ್ರರಿ ಒಳಗೋ
ಕಟ್ಟಡ ಲೈಬ್ರರಿಗಳೆರಡು ಕ್ಯಾಂಪಸ್ಸಿನೊಳಗೊ
ಕ್ಯಾಂಪಸ್ ನಲಿ ಊರೋ
ಊರೊಳಗೆ ಕ್ಯಾಂಪಸ್ಸೊ
ಕ್ಯಾಂಪಸ್ ಊರುಗಳೆರಡು
ದೇಶದೊಳಗೊ
ದೇಶದೊಳು ಪೃಥ್ವಿಯೋ
ಪೃಥ್ವಿಯೊಳು ದೇಶವೊ
ದೇಶ ಪೃಥ್ವಿಗಳೆರಡು ಬ್ರಹ್ಮಾಂಡದೊಳಗೋ
“ಅಯೋಮಯ!”
ಈ ಪ್ರಪಂಚದ ಬಾಗಿಲು ?
ಮಂತ್ರ ?
ಮರೆತಿಹೆನೊ
ಅಥವಾ ಅರಿತೂ ಪಠಿಸಲು
ಮನಸಿಲ್ಲವೋ!
” ಸೇಸಮ್ಮ ಸೇಸಮ್ಮ ಬಾಗಿಲು ತೆಗೆ” ಎಂದು ಯಾರೋ ಅಂದಂತಾಯಿತು
ಬಾಗಿಲು ತೆರೆದುಕೊಂಡಿತು
ಮತ್ತೆ ಹೊರ ಜಗತ್ತಿಗೆ ” ಅಡಿಯಿಟ್ಟೆ
ಮಗುವಿನ ಮುಗ್ಧ ವಿಸ್ಮಯ ಮೂಡಿ
ಓದಿದ್ದನ್ನು ತಾಳೆ ಹಾಕಿ.
ಎಲ್ಲವೂ ನಿಚ್ಚಳ!“
ಈ ಸಂದರ್ಭದಲ್ಲಿ ನಮ್ಮನ್ನಗಲಿದ ಕವಿ ತಿರುಮಲೇಶರು ಸೇರಿದಂತೆ, ಎಲ್ಲಾ ಓದುಗ ಸಮುದಾಯಕ್ಕೆ
ಶ್ರೀಮತಿ, ಸುಮತಿ ಮೇಡಂ ಅವರ ಕವಿತಯೊಂದರ, ” ಸೇಸಮ್ಮ ಸೇಸಮ್ಮ ಬಾಗಿಲು ತೆಗೆ” ರೂಪಕವನ್ನು ಎರವಲಾಗಿ ತೆಗೆದುಕೊಂಡಿರುವೆ. ಧನ್ಯವಾದಗಳು
ಗೋನವಾರ ಕಿಶನ್ ರಾವ್.ಹೈದರಾಬಾದ್