ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಿತ್ತನೆ’

ಸ್ನೇಹ ಸರಸ
ನೆಲದ ಮಣ್ಣಲಿ
ತನುವ ಸಂತಸ
ಬಿತ್ತನೆ
ನಗೆಯ ಮಲ್ಲಿಗೆ
ಅರಳಿ ನಿಂತಿವೆ
ಪ್ರೀತಿ ಪ್ರೇಮದ
ಸಿಹಿ ತೆನೆ
ಬಂಡೆಗಲ್ಲಿನ
ಚಿತ್ರ ಚೆಲುವು
ಗಟ್ಟಿ ಶಿಲ್ಪಿಯ
ಉಳಿಯ ಕೆತ್ತನೆ
ಮೂರ್ತಿ ಮೂಡಿತು
ಶ್ರಮದ ಸಂಭ್ರಮ
ಕಲೆಯ ಬಲೆಯ
ಕಲ್ಪನೆ
ನಾನು ಸೋತು
ನಾವು ಗೆದ್ದೇವು
ಜಗದ ಮಣೆಯ
ಪ್ರೇರಣೆ
ಎಲ್ಲ ಕಡೆಗೆ
ಹಸಿರು ಒಲುಮೆ
ಸತ್ಯ ಸಮತೆಯ
ಚಿಂತನೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Excellent Poem Sir
ಸುಂದರ ಕವನ ಸರ್
ನಾನು ಸೋತು
ನಾವು ಗೆದ್ದೆವು ಎನ್ನುವ ಬಿತ್ತನೆ ಅಪರೂಪದಲ್ಲಿ ಅಪರೂಪದ ಸಾಲುಗಳ ಕವನ
ಸುತೇಜ
ಕವನ ತುಂಬಾ ಚೆನ್ನಾಗಿದೆ ಮನಮುಟ್ಟುವಂತಹದು
ಅಕ್ಕಮಹಾದೇವಿ