ಕಾವ್ಯ ಸಂಗಾತಿ
ಮಹಾಂತೇಶ ಬಸಪ್ಪ ಬಾಳಿಗಟ್ಟಿ
‘ಇವ್ರು ಒಂದs ತರಾ ಮಂದಿ’
ಇವ್ರು ಒಂದs ತರಾ ಮನಸಿನಾವ್ರು
ಏನಾರಾ ಆಗ್ಲಿ, ಒಂದ ತರಾ ಇರಾವ್ರು |ಪ|
ಪೈಸಾ ಬೆನ್ನ ಹತ್ತಿ, ಯಾರು ಬ್ಯಾಡ ಅನ್ನಾವ್ರು
ಕಳಕೊಂಡ ಮ್ಯಾಲ, ನೆಂಟರನs ಹುಡಕಾವ್ರು
ಸಹಾಯ ಮಾತ್ ಬಂದ್ರ, ಸನೆಕs ಬರದವ್ರು.
ಗೆಳೆರು, ನೆಂಟರ ಬಾಳs ಬೇಕs ಅನ್ನಾವ್ರು.
ಯಾರಿಗೂ ಸ್ವಲ್ಪವೂ ಕಿಮ್ಮತ ಕೊಡದಾವ್ರು,
ಎಲ್ಲಾರೂ ಕಿಮ್ಮತ ಬಾಳs ಕೊಡಬೇಕು ಅನ್ನಾವ್ರು.
ಮೈಮುರಿದು ದುಡಿದ ಬ್ಯಾಡ ಅನ್ನು ಮನಿಸಿನಾವ್ರು.
ಆರಾಮ ಇರ್ಬೇಕಂತ ಬೆಳಿಗ್ಗಿ ಕಸರತ್ತು ಮಾಡಾವ್ರು.
ಕಷ್ಟ, ನಷ್ಟ, ನೋವು ಆದಾಗ ದೇವ್ರನ ನೆನೆವ್ರು,
ಸುಖ ಹೆಚ್ಚಾದ್ರ, ದೇವ್ರ ಹೆಸರು ಹೇಳ್ದವ್ರು.
ಬಗಿಹರಿದs ವಿಚಾರದs ಚಿಂತಿ ಮಾಡಿ ಸೊರಗಿ ಬಿಡವ್ರು,
ಆರಾಮ ಇಲ್ಲ ಅಂತ ಹೇಳ್ಕೊಂತ ತಿರಗಾವ್ರು.
- ಮಹಾಂತೇಶ ಬಸಪ್ಪ ಬಾಳಿಗಟ್ಟಿ