ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ನಿನ್ನ ಪ್ರೀತಿಸುವ ಜನರಿಗೆ ನೀನು ಋಣಿ
ನಿನ್ನ ದ್ವೇಷಿಸುವ ನರರಿಗೆ ನೀನು ಋಣಿ
ಅವಲಂಬಿತರೇ ಇಲ್ಲಿ ಎಲ್ಲರೂ ಪ್ರತಿ ವಿಷಯದಿ
ನೆಮ್ಮದಿ ತಂದಿತ್ತ ಎಲ್ಲರಿಗೆ ನೀನು ಋಣಿ
ಗತ ನೆನೆಪು ಇಂದು ಪ್ರೀತಿಸೆ ಭರವಸೆ ನಾಳೆ
ಹಿಂದೆ ನಲಿವು ಇತ್ತವರಿಗೆ ನೀನು ಋಣಿ
ನಿನ್ನ ಸಂತತಿ ನೆನ್ನೆಗಳು ಇತ್ತ ಬಳುವಳಿ ಗೊತ್ತೇ
ನಿನ್ನ ಮಾತನು ಸರಿ ಎಂದವಗೆ ನೀನು ಋಣಿ
ಕೃಷ್ಣಾ! ಯುದ್ಧ ನಿಶ್ಚಯಿಸಿದೆ ಸಂಧಾನವೆಂದೆ
ಗೀತೆಗೆ ಮೂಲ ಕೌರವಂಗೆ ನೀನು ಋಣಿ
ಬಾಗೇಪಲ್ಲಿ
ಸರ್ವಂ ಕೃಷ್ಣಮಯಂ