ಕಾವ್ಯ ಸಂಗಾತಿ
ವ್ಯಾಸ ಜೋಶಿ
‘ಅಲ್ಲಿ ಹೀಗಿರಲಿಕ್ಕಿಲ್ಲ’
ನೋಡು ನಿನ್ನೆ ನೀನು ಹೊಂಟಾಗ
ಕಳಿಸಲು ಎಷ್ಟೊಂದು ಜನ,
ಬಾಜಾ ಭಜಂತ್ರಿ, ಪಟಾಕಿ, ಇಮಾನು
ನಿನ್ನ ಶ್ರೀಮಂತಿಕೆ ತೋರಿಸಲು
ರಾಶಿ ರಾಶಿ ಹೂವಿನ ಹಾರ
ಕೊಟ್ಟ ಹಣಕ್ಕೆ ತಕ್ಕಂತೆ ಸುಳ್ಳು ಕಥೆ ಕಟ್ಟಿ ಹಾಡ್ಯಾಡಿ ಅಳುವ ಹೆಂಗಸರು.
ಇಂದು ನಾನೂ ಬರುತಿರುವೆ,
ನಾನು ಬಡವನಲ್ಲವೇ…….
ಸ್ವಲ್ಪವೇ ಜನ, ಭಜನೆ .
ಮಠದ ಇಮಾನು ಮಾತ್ರ
ನನಗೂ ಕರೆದೊಯ್ಯಲು ಬಂದಿದೆ.
ಒಂದೇ ಹೂವಿನ ಹಾರ
ಅಳಲು ಹಣವನ್ನೂ ಕೊಟ್ಟಿಲ್ಲ.
ಮಿತ್ರ ಬಂದು ನಿನ್ನ ಬೇಟೆಯಾಗುವೆ.
ಅಲ್ಲಿ ಎಲ್ಲರೂ ಸಮಾನರೆ
ಬಡವ, ಶ್ರೀಮಂತ.ಭೇದ ಭಾವ
ಅಲ್ಲಿ ಹೀಗಿರಲಿಕ್ಕಿಲ್ಲ.
————————————–
ವ್ಯಾಸ ಜೋಶಿ