ಚೆಲುವ ನಾಡು ಕನ್ನಡ ನಾಡು

ಚೆಲುವ ನಾಡು ಕನ್ನಡ ನಾಡು
ಕಲೆ ಸಂಸ್ಕೃತಿಯ ನೆಲೆವೀಡು
ಸೃಜನಶೀಲ ವ್ಯಕ್ತಿತ್ವ
ಸದಭಿರುಚಿಯ ಸಾಹಿತ್ಯ||

ಕಥೆ ಕವನ ಕವಿತೆಯ ಚಿತ್ತಾರ
ಕಾವ್ಯ ಸ್ಪಂದನೆಯ ಸಹಕಾರ
ಕನ್ನಡದ ಹೆಮ್ಮೆಯ ಮನ
ಪ್ರೀತಿಯ ಕವಿಗಳ ಹೂಮನ||

ಬಯಸುವ ವನಸಿರಿ
ಕರ್ನಾಟಕದ ಮಧುರ ಗಿರಿ
ಕಲೆಗಳ ತವರೂರು
ಶಿಲ್ಪಕಲೆಯ ಬೇಲೂರು||

ಜೋಗ್ ಜಲಪಾತದ
ಸುಂದರ ನೋಟದ
ಚೆಲುವ ಕನ್ನಡನಾಡು
ಹಸಿರಿನ ಉಸಿರಿನ ಕರುನಾಡು||

ಭಾಷೆ ಜೀವದ ಒಲುಮೆ
ಒಲವ ಸಾಗರದ ಪ್ರತಿಮೆ
ಒಗ್ಗೂಡಿದ ಬಾಂಧವ್ಯ
ಬೆಸೆಯುವ ಮಧುರತೆಯ ನವ್ಯ ||


Leave a Reply