ಸಜ್ಜೆಯುಪ್ಪರಿಸಿ ಶಿವಲಿಂಗ ನೀನೆನ್ನ ಕರಸ್ಥಲಕ್ಕೆ ಬರೆ
ಪ್ರಜ್ವಲಿಸಿ ಬೆಳಗುತಿಹ ಕಾಂತಿಯಲಿ
ಜಜ್ಜರಿಸಿ
ತನು ಮನ ದೃಷ್ಟಿ ನಟ್ಟು ಲಿಂಗದಲಿ ವಜ್ಜರಿಸುವ
ಶಿವ ಸುಖ ದೊಳಗೋಲಾಡುತ್ತ ಸಜ್ಜನ
ಸದ್ಭಕ್ತಿರತಿಯೊಡನೆ ಕೂಡಿ
ಲಜ್ಜೆಗೆಟ್ಟು  ನಿಮ್ಮ ನೆರೆವೆ ಚೆನ್ನಮಲ್ಲಿಕಾರ್ಜುನಾ .

ಅಕ್ಕನ ಅರಿವಿನ ಭಾವ ಗಂಡ ಚೆನ್ನಮಲ್ಲಿಕಾರ್ಜುನ ಇಷ್ಟ ಲಿಂಗದಲಿ ಮೈ ದೋರಿ ನಿಂತು ಲಜ್ಜೆ ಗೆಟ್ಟವಳಾಗಿ, ಮೈಮರೆತು ಸದ್ಭಕ್ತಿ ರತಿಯಿಂದ ನನ್ನ ದೇಹ ಲಜ್ಜೆ ಯ ಅಂದರೆ ನಾಚಿಕೆಯಿಂದ ನಿಮ್ಮಲ್ಲಿ ಸಮರಸಗೊಳ್ಳುವೆ ಚನ್ನಮಲ್ಲಿಕಾರ್ಜುನಾ .
ನನ್ನ ತ್ರಿಕರಣಗಳು ನಿಮ್ಮಲ್ಲಿಯೇ ದೃಷ್ಟಿನೆಟ್ಟು .ಕರಡಿಕೆಯಿಂದ ಹೊರಬಂದು ನನ್ನ ಕರಸ್ಥಲದಲ್ಲಿ  ಹೊಳೆಯುವ ದಿವ್ಯ ಪ್ರಕಾಶ ಚೇತನವಾಗಿ ರೂಪಗೊಂಡಿರುವೆ ಚೆನ್ನಮಲ್ಲಿಕಾರ್ಜುನಾ ,ಇಂಥಹ ದಿವ್ಯವಾದ ಪ್ರಕಾಶದಲ್ಲಿ ನಾನು ಮೈಮರೆತೆ ಭಗವಂತ ಎನ್ನುವ ಅಕ್ಕನ ಅರಿವಿನ ಭಾವ ಈ ಒಂದು ವಚನದಲ್ಲಿ ಕಂಡು ಬಂದಿದೆ .

ಅಕ್ಕ ಮಹಾದೇವಿಯ ಕುರಿತು ಚೆನ್ನ  ಬಸವಣ್ಣನವರು
ತನುವಿನೊಳಗಿದ್ದು ,ತನುವ ಗೆದ್ದಳು , ಮನದೊಳಗಿದ್ದು ಮನವ ಗೆದ್ದಳು, ವಿಷಯದೊಳಗಿದ್ದು, ವಿಷಯಂಗಳ ಗೆದ್ದಳು, ಅಂಗಸುಖವ ತೊರೆದು ಭವಗೆದ್ದಳು ,ಕೂಡಲಸಂಗಯ್ಯನ ಹೃದಯ ಕಮಲವ ಬಗಿದು ಹೊಕ್ಕು  ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.

ಅರಿವಿಲ್ಲದ ಈ ಜಡದೇಹ ರಕ್ತ, ಮಾಂಸ ,ಮೂಳೆ ,ಮಲ, ಮೂತ್ರ ದ ನಿಲಯವಾದ  ಈ ದೇಹವನ್ನು ಅಕ್ಕಮಹಾದೇವಿಯು ಅಭಿಮಾನಿಸದೆ, ಈ ದೇಹದ ದೇಹವು ನನ್ನದಲ್ಲ  .ದೇಹದೊಳಗೆ ಇರುವ ಸರ್ವ ಇಂದ್ರಿಯ ಶರಣಾದಿಗಳಿಗೆ ,ಸಚ್ಚಿದಾನಂದ ಸ್ವರೂಪ, ಚೈತನ್ಯ ಸ್ವರೂಪ, ನಿತ್ಯ ಪರಿಪೂರ್ಣ ಪ್ರೇರಕ, ಆ ಪರಮಾತ್ಮ ಸ್ವರೂಪ ,ಪರಬ್ರಹ್ಮ ಸ್ವರೂಪ ವೆಂದು ಭಾವಿಸಿಕೊಂಡ ಈ ದೇಹ ಎನ್ನುವ ಮಾಥ್ಯಾ ಭ್ರಾಂತಿಯನ್ನು ದೂಡಿದ ವೈರಾಗ್ಯ ನಿಧಿ ಅಕ್ಕಮಹಾದೇವಿಯು, ತನುವಿನೊಳಗೆ ತನು ಭಾವವಿಲ್ಲದೆ ಇರುವುದರಿಂದ ತನುವ ಗೆದ್ದಳು.
   ಚಪಲ ಚೇಷ್ಟೆಗಳ ಹೀನ ವಿಷಯಗಳಿಗೆ ನನ್ನನ್ನು ಹಿಡಿದು ಜಗ್ಗುವ, ಕಪಿ ಚೇಷ್ಟೆ ಮಾಡುವ ಈ ಎಳೇಯ ಮನವನ್ನು ಹತೋಟಿಯಲ್ಲಿಟ್ಟು, ಅಕ್ಕಳು ಹೇಳಿದದಂತೆಯೇ ಅಕ್ಕಳ ಮನ ತನ್ನಿಚ್ಚೆಯಂತೇ ವರ್ತಿಸತೊಡಗಿತು. ಕಾರಣ ಅಕ್ಕಳು ಮನದೊಳಗೆ ಇದ್ದು ಮನವ ಗೆದ್ದಳು.
ಶಬ್ದ, ರೂಪ,ರಸ, ಸ್ಪರ್ಶ, ಗಂಧ ಇಂಥಹ ಬಲಿಷ್ಠವಾದ ವಿಷಯಗಳನ್ನು ದೂರೀಕರಿಸಿ ವಿಷಯದೊಳಗಿದ್ದು, ವಿಷಯಗಳನ್ನು ಗೆದ್ದಳು .

ತಾತ್ಕಾಲಿಕವಾದ ಅಂಗ ಸುಖ ಕ್ಷಣ ಮಾತ್ರದಲ್ಲಿ ಸುಖವೆಂದು ತೋರಿದರೂ, ಈ  ಹುಟ್ಟು ಮತ್ತು ಸಾವುಗಳ ಭಾವದಲ್ಲಿ ಬಿದ್ದು, ಕಷ್ಟವನ್ನು ಅನುಭವಿಸುವ ಈ ದೇಹ ಭಾವದಲ್ಲಿ ಬಿದ್ದು  ವದ್ದಾಡುವ ,ಈ  ಲಿಂಗ ಸುಖವನ್ನು ತೊರೆದು ,ಅಕ್ಕಳು ಭವ ಗೆದ್ದು ಶ್ರೇಷ್ಠ  ಮುಕ್ತಿ ಪದವಿಯನ್ನು ಅಕ್ಕಳು ಪಡೆದಳೆಂದು, ಇಂಥಹ ಅಕ್ಕಳ ಪಾದಾರವಿಂದಕ್ಕೆ ಅನಂತ ಶರಣು ಶರಣಾರ್ಥಿಗಳೆಂದು ಶ್ರೀ ಚೆನ್ನ ಬಸವಣ್ಣನವರು ಹೇಳುತ್ತಾರೆ .


Leave a Reply

Back To Top