ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ಕನ್ನಡಿಯಲ್ಲಿ ಪ್ರೇಮಿಗಳ
ಪ್ರತಿಬಿಂಬ ಕಂಡಂತೆ
ಸುಂದರ ಮುಸ್ಸಂಜೆಯಲ್ಲಿ
ನನ್ನ ಜೀವನದಿ ನೀ ಆಗಮಿಸು

ಧರಣಿಯನ್ನು ಮಳೆ ಅಪ್ಪಿ
ಸಂಥೈಸಿದಂತೆ 
ನೀನೆನಗೆ ನಿನ್ನ ಪ್ರೀತಿಯ
ವರ್ಷಧಾರೆ  ಸುರಿಸು

ಮುಂಜಾನೆಯ ಸೂರ್ಯ ಕಿರಣ
ಅಂಗಳಕ್ಕಿಳಿದಂತೆ
ಈ ಮೃದು ಹೃದಯದಿ ನಿನ್ನ
ಛಾಯೆ ಅಚ್ಚೊತ್ತಿ ಅರ್ಪಿಸು

ನಿನ್ನ ಸ್ಪರ್ಶದಿಂದ ಬೆಳಕಾಗಲಿ
ಕತ್ತಲೆ ಕಳೆದಂತೆ
ನಿನ್ನಸ್ತಿತ್ವದಲಿ ಅದೇನು ಮಾಯೆ
ಅಚ್ಚಳಿಯದೆ ನನ್ನಲ್ಲಿ ನೆಲೆಸು
——————————-

About The Author

Leave a Reply

You cannot copy content of this page

Scroll to Top