ಪ್ರಮೋದ ಜೋಶಿ ಅವರ ಕವಿತೆ-ಗಾಂಧಿ ಇನ್ನು ಇದ್ದಿದ್ದರೆ

ಸತ್ಯ ದೂರಾಗಾಗಿದೆ ಹಿಂಸೆ ತಲೆದೋರಿದೆ
ಗಾಂಧಿ ಹುಟ್ಟಿದ ದೇಶವೆಂದು
ಹೇಳಲು ಸ್ಂಕೋಚಚೆನಿಸಿದೆ

ಅಹಿಂಸದ ಪಥದಮೇಲೆ ಸತ್ಯದ ಕೊಲು ಊರಿ
ನಾವೆಲ್ಲಾ ಒಂದೆ ಎಂದು ಸಾರಿಹೇಳಿದ ದೇಶವಿದು
ಇಂಥ ದೇಶದೊಳಗೆ ಯಾದವಿ ಕಕ್ಶ ತಲೆದೋರಿದೆ

ಕಂಡಲ್ಲಿ ಕಗ್ಗೊಲೆಯಾದರೆ
ನುಡಿಯಲ್ಲಿ ಅಸತ್ಯ ಮೂಡುತಿದೆ
ನಾವೆಲ್ಲಾ ಒಂದೆಂಬ ಭಾವನೆ
ದೂರ ದೂರ ಹೋಗುತಿದೆ

ಗಡಿ ಕಲಹ ಜಾತಿ ವಿವಾದ
ಭಾಷಾ ವೈಷಮ್ಯ ಮೂಡಿ ಬಂದು
ದೇಶ ಛಿದ್ರ ಛಿದ್ರವಾಗಿದೆ

ಇಂಥ ದಿನದೊಳಗೆ ಗಾಂಧೀ ಇನ್ನೂ ಇದ್ದಿದ್ದರೆ
ಸ್ವಾತಂತ್ರ್ಯ ದೊರಕಿದ್ದು ತಪ್ಪಾಯಿತೆಂದು
ಆತ್ಮಹತ್ಯಗೈಯುತ್ತಿದ್ದರೋ ಏನೊ ?
ಎಂಬ ಪ್ರಶ್ನೆ ಮೂಡಿದೆ ಮೂಡಿ ಮನಸು ಮುದುಡಿದೆ


Leave a Reply

Back To Top