ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಏನಿದೆ ಪ್ರತಿ ದಿನ ನೋಡೆ ಸೂರ್ಯಾಸ್ತ ಉದಯದಿ ವೆತ್ಯಾಸ
ಹುರುಪುಗೊಳ್ಳೆ ದಿನಂಪ್ರತಿ ವೀಕ್ಷಣೆ ಮಾಡುವುದೆನ್ನ ಅಭ್ಯಾಸ
ಅಲಂಕಾರ ಪ್ರಿಯ ವಿಷ್ಣು, ಅಭಿಷೇಕ ಪ್ರಿಯ ಶಿವ ಇಬ್ಬರೂ ದುಬಾರಿ
ಪ್ರತ್ಯಕ್ಷ ದೇವನೀತ ಸುಲಭದಿ ಸಿಗುವ ನಮಸ್ಕಾರ ಪ್ರಿಯ ತಾಮಸ
ಜನತೆಯ ಮೈ ಮನವನು ಚೈತನ್ಯ ವಾಗಿಸುವುದು ಇನನ ರಶ್ಮಿ
ಚಟುವಟಿಕೆ ಇಲ್ಲದ ಬದುಕು ಆಗುವುದು ಬಹಳಷ್ಟು ನೀರಸ
ಬೇಂದ್ರೆ ಅಂದರು ಸೂರ್ಯೋದಯವ ಬರಿ ಬೆಳಗಲ್ಲೋ ಅಣ್ಣಾ!
ತಾತ ಹಾಗೆನುವಾಗ ಯುವಕ ಏಕಾಗುವೆ ತ್ರಾಣವಿಲ್ಲದೆ ಆಲಸ
ಕೃಷ್ಣಾ! ವಿಶ್ರಾಂತಿ ರಹಿತ ದೇವನೊಂದಿಗೂ ಮಾಡಿದೆ ಒಮ್ಮೆ ಕುಯುಕ್ತಿ
ಜಗನ್ನಿಯಾಮಕ ನೆನಿಸಿಹ ನಿನಗೆ ಆನಿಸಲಿಲ್ಲವೆ ಅದು ಆಭಾಸ
ಬಾಗೇಪಲ್ಲಿ