ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ

ಕೇಳು ಒಲವೇ…..
ನಿನಗರ್ಥವಾಗುವುದಿಲ್ಲ  ಆದರೂ
ಹೇಳ ಬಯಸುತ್ತೇನೆ
ಹೌದು ನಾನು  ಪ್ರೀತಿಸುತ್ತಿದ್ದೇನೆ,
ನಿನ್ನನ್ನಷ್ಟೇ ಅಲ್ಲ
ನನ್ನನ್ನು ಕೂಡ, ಏಕೆಂದರೆ
ನನ್ನಲ್ಲಿ ನೀನೇ ಐಕ್ಯವಾಗಿರುವೆ
ಈ ಹೃದಯ ಬಡಿತದಂತೆ
ನನ್ನುಸಿರಲ್ಲಿ ಉಸಿರಾಗಿ
ನನ್ನ ಮಡಿಲ ಹೂವಲ್ಲಿನ
ಪರಿಮಳದಂತೆ
ನುಡಿಯಲ್ಲಿನ ಮಾಧುರ್ಯದಂತೆ
ನನ್ನ ದೇಹದಲ್ಲಿರುವ ಆತ್ಮದಂತೆ,
ಪೂಜೆಯಂತೆ ಪ್ರಾರ್ಥಿಸಿದಾಗ
ನಿನ್ನೊಲವ ವರ್ಷದಲ್ಲಿ
ಮಿಂದು ನೆಂದಿರುವೆ
ಮಳೆಯಲಿ ಒದ್ದೆಯಾದ
ಮಳೆಹನಿಗಳಂತೆ,
ನನ್ನ ಸ್ಪರ್ಶಸಿ
ಹಾದುಹೋಗುವ ತಂಗಾಳಿಯಂತೆ
ಈ ಕನಸು ಕಂಗಳ
ಕಪ್ಪಾದ ಕಾಡಿಗೆಯಂತೆ
ನನ್ನಧರಗಳ ಕೆಂಪು ಬಣ್ಣದಂತೆ,
ನೀನ್ನಿಲ್ಲದಿರುವ ಯಾವ ಭಾಗವು
ನನಗೆ ಗೋಚರಿಸುವುದಿಲ್ಲ
ಈಗ ಹೇಳು ಸಖನೇ
ನನ್ನದು ಪರಿಪೂರ್ಣ
ಅನುರಾಗವಲ್ಲವೇ….??

———————-

One thought on “ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ

Leave a Reply

Back To Top