ವ್ಯಾಸ ಜೋಶಿಅವರ ತನಗಗಳು

ಸುಖ-ದುಃಖವು ಸೇರಿ
ಆತ್ಮಕಥೆ ಪುಸ್ತಿಕೆ,
ಜನನ-ಮರಣವೇ
ಪುಸ್ತಕದ ಹೊದಿಕೆ.
*
ನಿಜವಾದ ಸಂಬಂಧ
ಒಂದೊಳ್ಳೆಯ ಪುಸ್ತಕ,
ಹಳೆಯದಾದರೇನು
ಪದ ಬದಲಾಗದು.
**
ನಿರಾಳದ ಬದುಕು
ಬಯಸುವ ಸಂಸಾರಿ,
ಸಂತೆಯಲಿ ನಿಶಬ್ದ
ಅರಸಿದಂತೇ ಸರಿ!
**
ನೋವಿಗೆ ಮನನೊಂದು
ಬೇಡವೋ ಪಲಾಯನ!
ಜವಾಬ್ದಾರಿ ಅರಿತ-
-ಬಾಳ್ವೆ ಬಲುಹಸನ.
**
ಕಹಿಯ ಮರೆಯೋದು
ತನು ಮನಕೆ ಲೇಸು,
ಸಿಹಿಯ ಮೆಲಕುಹಾಕಿ
ಹಂಚುವುದೇ ಸೊಗಸು.
**
ಪರರ ಏಳಿಗೆಗೆ
ಹೊಟ್ಟೆ-ಕಿಚ್ಚನು ಬಿಟ್ಟು,
ನೀ ಎತ್ತರಕ್ಕೆರಲು
ಮೊದಲು ಏಣಿ ಕಟ್ಟು.

Leave a Reply

Back To Top