ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ್
ಕಲಾದೇವಿಯ ಆರಾಧಕರು
ಕಲಾವಿದರು.
ಮನುಷ್ಯ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸಲು ಬಯಸುವ ವ್ಯಕ್ತಿ. ಅವನಿಗೆ ಯಾವುದೇ ಅಡೆ-ತಡೆಗಳು ಸಹನೆಯಾಗುವುದಿಲ್ಲ.ಪ್ರಕೃತಿ ನೀಡಿದ ಎಲ್ಲ ಸವಲತ್ತನ್ನು ಹಾಗೂ ಪ್ರತಿಯೊಂದು ಕ್ಷಣವನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಡಲು ಬಯಸುತ್ತಾನೆ;ಆರಾಧಿಸುತ್ತಾನೆ.ಮತ್ತು ಅದರೊಂದಿಗೆ ಜೀವನ ನಡೆಸಲು ತನ್ನದೇ ಆದ ಬೇಲಿಯನ್ನು ತನಗರಿವಿಲ್ಲದೇ ಕಟ್ಟಿಕೊಂಡಿದ್ದಾನೆ.ಮನುಷ್ಯನ ಜೀವಿತಾವಧಿಯ ಕೊನೆಯವರೆಗೆ ಅವನ ಬದುಕು ಯಾರೋ ಸೂತ್ರ ಹಿಡಿದು ಆಡಿಸುವ ಸೂತ್ರದಾರನ ಕೈಲಿರುವ ಗೊಂಬೆಯಂತೆ ಆಡುತ್ತಿರುತ್ತೆ.ಇದೆಲ್ಲ ನಮಗೆ ಗೊತ್ತಿರುವ ಸಂಗತಿ.ಯಾಕೆಂದರೆ ಪ್ರತಿ ಜೀವಿಯಲ್ಲಿ ಒಬ್ಬ ಕಲಾವಿದ ಅಡಗಿರುತ್ತಾನೆ….ಹೌದು,ಕಲೆಯು ಜೀವಂತಿಕೆಯ ಜೀವಾಳ!.
ನನಗೆ ತಿಳುವಳಿಕೆ ಬಂದಾಗಿಂದ ಯಕ್ಷಗಾನವನ್ನು ತುಂಬ ಹತ್ತಿರದಿಂದ ನೋಡಿದ್ದೆನೆ.ಯಕ್ಷಗಾನದ ಪ್ರಚಾರದ ರಿಕ್ಷಾದ ಹಿಂದೆ ಓಡೋದು ಬಹಳ ಹಿತವಾಗಿತ್ತು.ಪಾಂಪ್ಲೆಟ್ ಕೈಲಿ ಹಿಡಿದು ಇವತ್ತು ಇಂತಹ ಮೇಳದವರಿಂದ
ಆಟ…ಆಟ…ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ,೯.೩೦ ಕ್ಕೆ ಪ್ರಾರಂಭವಾಗುವ ಯಕ್ಷಗಾನದ ಟೆಂಟ್ ನೋಡುವುದು ಹಬ್ಬ ನಮಗೆ
ಕಲಾದೇವಿಯನ್ನು ಗೌರವಿಸದ ಸಮುದಾಯವಿಲ್ಲ!. ನನಗೊಂದು ಕುತೂಹಲ, ಎಲ್ಲರೂ ಹೇಗೆ ಮೆಕಪ್ ಮಾಡತಾರೆ? ಸಾಮಾನ್ಯ ಮನುಷ್ಯ ಪಾತ್ರದೊಳಗೆ ಲೀನವಾಗುವ ಪರಿ ಮರೆಯಲಾರದ್ದು.ಯಕ್ಷಗಾನದ ಮೇರು ಪ್ರತಿಭೆ, ಪದ್ಮಶ್ರೀ ಪುರಸ್ಕೃತ ಶ್ರೀ”ಚಿಟ್ಟಾಣಿ ರಾಮಚಂದ್ರ ಹೆಗಡೆ”ಯವರನ್ನು ಅವರ ನಟನೆಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬ.ಹೆಣ್ಣು ಮಕ್ಕಳನ್ನು ನಾಚಿಸುವ ಮಂಟಪ ಉಪಾಧ್ಯಾಯ ನನಗೆ ಅಚ್ಚುಮೆಚ್ಚು.ಇವರಿಬ್ಬರ ಜುಗಲಬಂದಿ ಪ್ರೇಕ್ಷಕರ ಮನಗೆದ್ದ
ಕಲಾವಿದರನ್ನು ಮಾತಾಡಿಸುವುದು ನಮಗೆಲ್ಲ ಹಬ್ಬವೇ.ಅವರು ಮೆಕಪ್ ಮಾಡುವಾಗ ಅವರ ಸಂಭ್ರಮ ಸಡಗರ ಮೆಚ್ಚುವಂತಹುದು.ಎಲ್ಲರೂ ಅವರವರ ವೈಯಕ್ತಿಕ ಕನ್ನಡಿ ಮುಂದೆ ಕುಳಿತು,ತಮ್ಮ ಪಾತ್ರಕ್ಕನುಗುಣವಾಗಿ ಅಂದರೆ,ರಾಕ್ಷಸ,ರಾಜ,ಹೆಣ್ಣು ಪಾತ್ರ,ಪ್ರಾಣಿ, ವಿದೂಷಕ,ಹೀಗೆ ಹತ್ತು ಹಲವಾರು ಪಾತ್ರಗಳು ಒಬ್ಬ ಮನುಷ್ಯನಲ್ಲಿ ಅಡಗಿರುವ ಅಭಿವ್ಯಕ್ತಿಯನ್ನು ಹೊರಹೊಮ್ಮಲು ಇಷ್ಟ ಪಟ್ಟು ಕಲೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ರಂಗ ಮಂಟಪದಲ್ಲಿ ಸಾವಿರಾರು ಕಲಾಭಿಮಾನಿಗಳನ್ನು ಮನರಂಜನೆಯ ಮೂಲಕ ಮನಮುಟ್ಟುವಂತೆ ಪಾತ್ರ ನಿರ್ವಹಿಸುವ ಕಲಾವಿದರಿಗೆ ಶರಣೆನ್ನಬೇಕು. ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ೧) ಪೂರ್ವರಂಗ ೨) ಆರಿಸಿಕೊಂಡ ಕಥಾಭಾಗ.ಪ್ರಸಂಗ,ಪಾತ್ರಧಾರಿಗಳು,ವೇಷಭೂಷಣ,ಭಾಗವತಿಕೆ, ಮಾತುಗಾರಿಕೆ ಇವೆಲ್ಲವನ್ನೂ ನೈಜವಾಗಿ ಅನುಭವಿಸುವ ಕಾಲ ಮರೆಯಾಗುತ್ತಿದೆ.
ನಾಯಕ ನಟರೇನೋ….ಸದಾಕಾಲ ಮುಂಚೂಣಿಯಲ್ಲಿರುವರು,ಆದರೆ ಪೋಷಕ ನಟರು ಕೆಲಕಾಲ ನೆನಪಿದ್ದು ಮರೆಯಾಗುವ ದಿನಗಳು.ಅದೇ ಹಾಸ್ಯ ಕಲಾವಿದರು,ಹಾಸ್ಯಕ್ಕೆ ಮಾತ್ರ ಸೀಮಿತವಾಗಿ ಮರೆಯಾದ ನಕ್ಷತ್ರದಂತೆ.ಕಾರಣ,ದಿನದಿಂದ ದಿನಕ್ಕೆ ಬದಲಾಗುವ ಸಮಯ,ಸಂದರ್ಭ ಮನೋಭಾವಗಳು.ಯಕ್ಷಗಾನದಲ್ಲಿ ಮಿಂಚಿ,ಜನರನ್ನು ನಗೆಗಡಲಲ್ಲಿ
ಮಟ್ಟಕ್ಕೆ ತನ್ನನ್ನು ತಾನು ಸಮರ್ಥಿಸುವ ಮೂಲಕ ಜಗತ್ತಿನ ಎಲ್ಲ ಪ್ರೇಕ್ಷಕರನ್ನು ಸೆಳೆಯುವಷ್ಟು ಬೆಳೆದಿದ್ದಾರೆ.’ವಿದೂಷಕ’ ಹಾಸ್ಯಗಾರ,ಜೋಕರ್’ ಎಂಬೆಲ್ಲ ಹೆಸರುಗಳು.ನಗಿಸುವವಗೆ ನಗಲು ಬರಬೇಕು!.ಒಂದು ಕಲೆಗೆಯ ಮನದಾಳ ಪರಿಪೂರ್ಣಗೊಳ್ಳುವುದು, ಅದನ್ನು ಆಸ್ವಾದಿಸುವವನಿದ್ದಾಗ ಮಾತ್ರ.
ಇಂದು ಯಕ್ಷಗಾನ ಟೆಂಟಗಳಲ್ಲಿ ನಡೆಯುತ್ತಿಲ್ಲ! ಬೆಳತನಕ ನೋಡುವ ಸಮಯ ಬದಲಾಗಿದೆ.ವಿಶಾಲ ಬಯಲಿನಲ್ಲಿ ವಿರಾಜಮಾನವಾಗುವ ಟೆಂಟ್ಗಳು,ಪುಟ್ಟ ರಂಗಮಂದಿರ ಸೇರಿವೆ. ಆಸಕ್ತರ ಮನೆಬಾಗಿಲಿಗೆ ಮಾತ್ರ ಸೀಮಿತವಾಗುತ್ತಿವೆ.ಕ್ಯಾಸೆಟ್, ವಿಡಿಯೋ, ಫೇಸ್ ಬುಕ್ , ಇನ್ಸಟಾಗ್ರಾಮದಲ್ಲಿ ಇಂತಿಷ್ಟು ನಿಮಿಷಗಳಿಗೆ ಮುಕ್ತಾಯಗೊಳ್ಳುತ್ತಿದೆ. ಯಕ್ಷಗಾನ ಕಲಾವಿದರು, ಹಿನ್ನಲೆ, ಮುನ್ನಲೆದಯಡಿವವರಿಗೆ ಜೀವನ ನಡೆಸಲು ಕಷ್ಟದ ಕ್ಷಣಗಳು ಎದುರಾದರೆ ಆಶ್ಚರ್ಯ ಪಡಬೇಕಿಲ್ಲ!. ಕಲಾವಿದರು ಸೃಜನಶೀಲರು.ಆದರೆ ಯುವ ಪೀಳಿಗೆ ಇಂತಹ ಕಲೆಗಳಿಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ.ಧೀರ್ಘಕಾಲದ ಪರಿಶ್ರಮಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲವೆಂಬ ನಿರಾಸೆ ಮೂಡಿಸಿದೆ. ಅಲ್ಲಲ್ಲಿ ಕೆಲವು ಕುಟುಂಬಗಳು ಈ ಕಲೆಗಳನ್ನು ನಶಿಸಲು ಬಿಡಬಾರದೆಂದು ಕಷ್ಟ ನಷ್ಟದ ನಡುವೆ ಶ್ರಮಿಸುತ್ತಿವೆ.
ಆಗಾಗ,ನಾಟಕ ಕಂಪನಿಗಳು ಜಾತ್ರೆ ಸಮಯದಲ್ಲಿ ಹತ್ತುದಿನಗಳಿಗೆ ಸೀಮಿತ..ಒಂದು ನಾಟಕ ನೋಡಿ ಅದರಂತೆ ನಟಿಸುವ ಮನೋಭಾವದ ಯುವಪೀಳಿಗೆ ಹುಟ್ಟುತ್ತಿರಬೇಕು ಅನ್ಬಿಸುತ್ತದೆ. ಲಾಭ,ನಷ್ಟದ ನಡುವೆ ಕಲಾವಿದರ ಬಾಳು,ಬದುಕು ಬೀದಿಗೆ ಬಂದರೆ ಒಂದು ನೈಜ ಕಲೆಯನ್ನು ಜೀವಂತವಾಗಿ ಕೊಂದಂತೆ!.ಇದು ನಶಿಸುವ ಹಂತದಲ್ಲಿದೆ ಎಂಬ ಅನುಮಾನಗಳು ಹುಟ್ಟದೆ ಇರದು!.ನಾವೆಲ್ಲ ಎಲ್ಲಿ ಕಾಣೆಯಾಗುತ್ತಿದ್ದೆವೆ? ಎಂಬ ಮಾತು ನಮ್ಮೊಳಗೆ ನಾವು ತಿಳಿಯಬೇಕಾಗಿದೆ.ಜನಪದರ ಬಯಲಾಟವೂ ಹೊರತೆನಿಲ್ಲ.
ಬೊಂಬೆ ಆಡ್ಸೋನು..
ಮೇಲೆ ಕುಂತೋನು..
ನಮ್ಗೆ ನಿಮಗೆ..
ಯಾಕೆ ಟೆನ್ಷನ್ನು…..ಅನ್ನೊ ಹಾಡು ಪದೇ ಪದೇ ನೆನಪಾಗುತ್ತದೆ.
ಒಟ್ನಲ್ಲಿ ಹೇಳುವುದಾದರೆ,ಧಾರವಾಹಿಗಳ ಪ್ರಭಾವದಿಂದ ರಂಗಕಲೆ ನಶಿಸುತ್ತಿದೆ.ಮೊಬೈಲ್ ಬಂದ ಮೇಲಂತೂ, ಮಕ್ಕಳು ಇವನ್ನೆಲ್ಲ ನೋಡಲು ಆಸಕ್ತಿ ಒಹಿಸುತ್ತಿಲ್ಲ.ಮನರಂಜನೆಯ ಮಹತ್ವ ಮರೆಮಾಚುತ್ತಿದೆ.ತೆರೆಯ ಮುಂದೆ ರಾಜ-ರಾಣಿಯರಾಗಿ, ಕುಬೇರನಂತೆ ಮೆರೆಯುವ, ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಲಾವಿದನ ಬದುಕು ವಾಸ್ತವದಲ್ಲಿ ಹಾಗಿಲ್ಲ. ಪರದೆಯ ಮುಂದೆ ನಟಿಸುವ ಕಲಾವಿದರು ಕ್ಷಣ ಮಾತ್ರದಲ್ಲಿ ಪರದೆಯ ಹಿಂದೆ ಯಾವುದೋ ಮೂಲೆಯಲ್ಲಿ ಗಂಜಿ ಬೇಯಿಸುತ್ತಿರುತ್ತಾರೆ. ಬದುಕು ಸಾಗಿಸುವುದು ಹೇಗೆ.? ಎಂದು ಪರಿತಪಿಸುತ್ತಿರುತ್ತಾರೆ. ಅವರ ಬದುಕು ಮುಳ್ಳಿನ ಹಾಸಿಗೆಯಲ್ಲಿ ಮೈಚೆಲ್ಲಿದಂತಿದೆ ಎಂಬ ಮಾತಿದೆ ಅದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಬದುಕು ಬವಣೆಗಳ ನಡುವೆ ಕಲಾವಿದರ ಬದುಕು ನಶಿಸದಂತೆ ಕಾಪಾಡುವ ಹೊಣೆ ಯಾರದ್ದು?ಕಲೆ ಗುರುತಿಸಿ ಬೆಳೆಸುವ ಉದ್ದೇಶ ಪರಿಪೂರ್ಣ ಪೈಪೋಟಿಯಿಂದ ಕೂಡಿದ್ದು, ಬೆಳವಣಿಗೆ ಹೇಗೆ ಸಾಧ್ಯ!. ಮೆಲಕು ಹಾಕಲು ಅರಿವು ಬಾನೆತ್ತರಕೆ ಬಾನಾಡಿ ಹಾರಿದಂತಿದ್ದರೆ ಒಳಿತೆಂಬ ಭಾವ ಅಷ್ಟೇ….
ಶಿವಲೀಲಾ ಶಂಕರ್
ಶಿವಲೀಲಾ ಹುಣಸಗಿ ಶಿಕ್ಷಕಿಯಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸ.ಹಿ.ಪ್ರಾ ಶಾಲೆ ಅರಬೈಲ್ ದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಣೆ.ಪ್ರಕಟಿತ ಕೃತಿಗಳು,ಬಿಚ್ಚಿಟ್ಟಮನ (ಕವನಸಂಕಲನ)ಬದುಕಂದ್ರೆ ಹೀಗೆನಾ? (ಕವನಸಂಕಲನ)ಗೋರಿಯ ಸುತ್ತ ಸಪ್ತಪದಿ ತುಳಿದಾಗ ( ಕಥಾಸಂಕಲನ)ಗಿರಿನವಿಲ ನೆನಪುಗಳು( ಪ್ರೇಮ ಲಹರಿಗಳು)
ಬಾಂಧವ್ಯದ ಮೆರಗು (ಅಂಕಣ ಬರಹ)ಬೊಗಸೆಯೊಳಗಿನ ಆಕಾಶ (ಅಂಕಣ ಬರಹ)ಸಂಕಲ್ಪೋತ್ಸವ ಕನ್ನಡ ನುಡಿಗವಿತೆಗಳು ( ಸಂಪಾದಕೀಯ ಕವನಸಂಕಲನ)ಚಿಣ್ಣರ ಕವಿತೆಗಳು ( ಸಂಪಾದಕೀಯ ಕವನ ಸಂಕಲನ)ಸಕಾಲ (ಅಂಕಣ ಬರಹ) ಬೇಲಿಯಾಚಿನ ಪಿಸುಮಾತು ( ಕವನ ಸಂಕಲನ).
Yakshagan karnataka da hemeya kale..egina piligege idara mahatva tilisuvudu tumba avyshakate ide