ಪ್ರಮೋದ ಜೋಶಿ ಅವರ ಕವಿತೆ-ಪರಿಪಾಠ

ಕುಡಿ ಕೂಡಿಸಿ ಕೂಡಿ ಕೂಡಿಸಿ
ಬಂದ ತೆನೆ ನಮ್ದೇನೆ
ರಾಶಿ ರಾಶಿ ಅಂತಾ ಹಾಸಿ ಕೂತರೆ
ಘಾಸಿಯಾಗೋದು ನಮ್ಗೇನೆ

ಬಡಿ ಹೊಡಿ ಕೆಲವ ಕಡಿ
ಕಸವ ಹೆಕ್ಕಿ ರಸವ ಪಡಿ
ಗುಂಪು ಗುಂಪಾಗಿಸಿ ಗುಂಪಿನೊಳಿಟ್ಟು
ಸೊಂಪಾದ ಫಲಕೆ ಆನಂದ ಪಡಿ

ಒಂದೊಂದು ಫಲಕೆ ಒಂದೋಂದು ದಿನ
ಕಾಯುವ ತಾಳ್ಮೆ ನಮಗಿರಲಿ
ಕಾಲ ಕಾಲಕೆ ಆರೈಕೆ ಇರುತಿರೆ
ಎಂಥ ಕಾಲಕೂ ಸೋಲೇನೆ

ಬಂದ ಹೊತ್ತು ಶ್ರಮದ ಸೊತ್ತು
ಶ್ರಮದ ಪಾಠವ ಮರೆಯದಿರು
ಕಠಿಣ ಒಲಿಮೆ ಪರಿಪಾಠಕೆ
ಜಟಿಲ ಕುಟಿಲವೂ ಬಾರದು

ಹಠವು ಇರಲಿ ಗಟ್ಟಿಯಾಗಿ
ಒಳ್ಳೆ ಫಸಲು ಪಡೆಯಲು
ಇಂಥದೆ ಫಸಲು ಎಲ್ಲಡೆ ಬರುತಿರೆ
ದೇಶಕು ಕೂಡಾ ಗರ್ವವು


Leave a Reply

Back To Top